ಬೆಂಗಳೂರು : ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಸಾವಿನ ಸುದ್ದಿಯಿಂದ ಮನಸ್ಸಿಗೆ ಬೇಸರವಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಧ್ರುವ ನಾರಾಯಣ್ ಅಂತಿಮ ದರ್ಶನದ ಬಳಿಕ ಮಾಧ್ಯಮದವರ ಎದುರು ಕಣ್ಣೀರಿಟ್ಟರು.
ಧ್ರುವ ನಾರಾಯಣ್ ಉತ್ತಮ ನಾಯಕ,ನಮಗೆ ಹಲವಾರು ಬಾರಿ ಗೈಡ್ ಮಾಡಿದ್ದಾರೆ, ಒಳ್ಳೆಯ ಕೆಲಸ ಮಾಡ್ತಾ ಇದ್ದೀಯಾ ಅಂತಾ ಬೆನ್ನು ತಟ್ಟಿದ್ದರು. ಚಾಮರಾಜನಗರ ಜಿಲ್ಲೆಯಲ್ಲಿ ಮೊರಾರ್ಜಿ ದೇಸಾಯಿ ಶಾಲೆ, ವಸತಿ ಶಾಲೆಗಳು ಬಂದಿವೆ ಎಂದರೆ ಅದಕ್ಕೆ ಧ್ರುವನಾರಾಯಣ್‌ರ ಕೊಡುಗೆ ಅಪಾರ ಎಂದು ಅಭಿಪ್ರಾಯಪಟ್ಟರು.
ಧ್ರುವನಾರಾಯಣ್ ಸಾವು ರಾಜಕೀಯ ವಲಯಕ್ಕೆ ತುಂಬಲಾರದ ನಷ್ಟ, ಈ ಭಾಗದ ಜನ ನತದೃಷ್ಟರು ಎನಿಸುತ್ತದೆ, ಅವರ ಕುಟುಂಬಕ್ಕೆ ಸಾವಿನ ದು:ಖ ಭರಿಸುವ ಶಕ್ತಿ ನೀಡಲಿ ಎಂದು ಭಾವುಕರಾದರು.
ಇನ್ನೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಮಾತನಾಡಿ, ವಿಧಿಯ ತೀರ್ಮಾನದ ಮುಂದೆ ನಮ್ಮ ತೀರ್ಮಾನ ಏನಿಲ್ಲ ಎಂಬುದಕ್ಕೆ ಇದು ಸಾಕ್ಷಿ, ಈ ಸುದ್ದಿ ಕೇಳಿ ನಮಗೆಲ್ಲ ಆಘಾತವಾಯಿತು. ಸರ್ಕಾರದ ಗೌರವದೊಂದಿಗೆ ಅಂತಿಮ ಸಂಸ್ಕಾರ ಮಾಡಲು ಸೂಚಿಸಿದ್ದೇವೆ ಎಂದರು. ನಮ್ಮದು ಧ್ರುವನಾರಾಯಣ್ರದ್ದು ಅವಿನಾಭಾವ ಸಂಬಂಧ. ಅವರ ಶ್ರೀಮತಿ ತುಂಬಾ ನೋವಿನಲ್ಲಿದ್ದರು , ನಮ್ಮ ಕಣ್ಣ ಮುಂದೆ ಈ ರೀತಿಯ ಘಟನೆ ನಡೆಯಬಾರದಿತ್ತು ಎಂದು ಭಾವುಕರಾದರು.