ಮಡಿಕೇರಿ: ವಿವಿಧ ಭಾಗ್ಯಗಳನ್ನು ಕೊಟ್ಟ ಸಿದ್ದರಾಮಯ್ಯಗೆ ಕ್ಷೇತ್ರ ಭಾಗ್ಯವೇ ಇಲ್ಲ. ಕ್ಷೇತ್ರ ಹುಡುಕಿಕೊಳ್ಳಬೇಕಾದ ದಯನೀಯ ಸ್ಥಿತಿ ಬಂದಿದೆ ಎಂದು ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಮೇಲೆ ಜನರಿಗೆ ವಿಶ್ವಾಸ ಇಲ್ಲ ಎಂಬುದು ಬಹಳ ಸ್ಪಷ್ಟವಾಗಿದೆ. ಅಂತಿಮವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವರುಣಾ ಕ್ಷೇತ್ರಕ್ಕೆ ಬರುತ್ತಾರೆ ಎನ್ನುವ ಮೂಲಕ ಮಡಿಕೇರಿಯಲ್ಲಿ ವ್ಯಂಗ್ಯ ಮಾಡಿದ್ದಾರೆ.
‘ಚುನಾವಣೆ ವಿಷಯದಲ್ಲಿ ನಮ್ಮದು ವಿಭಿನ್ನ ಕಾರ್ಯತಂತ್ರವಾಗಿರಲಿದೆ. ಕಾಂಗ್ರೆಸ್, ಜೆಡಿಎಸ್ ರೀತಿ ಇರುವುದಿಲ್ಲ. ದಕ್ಷಿಣ ಕರ್ನಾಟಕದ ಜನ ಕಾಂಗ್ರೆಸ್, ಜೆಡಿಎಸ್ನಿಂದ ಮಂಗಗಳಾಗಬೇಡಿ. ಯುಗಾದಿಗೆ ಕಾಂಗ್ರೆಸ್ ಟಿಕೆಟ್ ಅನೌನ್ಸ್ ಆಗಬೇಕಿತ್ತು, ಆದರೆ ಆಗಿಲ್ಲ. ಸಿದ್ದರಾಮಯ್ಯಗೆ ಕ್ಷೇತ್ರದ ಚಿಂತೆ, ಅವರ ಪತ್ನಿಗೆ ಮಗನ ಭವಿಷ್ಯದ ಚಿಂತೆಯಾಗಿದೆ.
ಹೆಚ್.ಡಿ.ರೇವಣ್ಣಗೆ ಭವಾನಿ ಚಿಂತೆ, ಕುಮಾರಣ್ಣಂಗೆ ನಿಖಿಲ್ ಚಿಂತೆ. ಕುಟುಂಬದ ಬಗ್ಗೆ ಚಿಂತೆ ಮಾಡುವವರಿಂದ ರಾಜ್ಯಕ್ಕೆ ಹಿತ ಸಿಗುವುದಿಲ್ಲ. ಆದ್ದರಿಂದ ಜನರು ಮಂಗ ಆಗಲು ಹೋಗಬೇಡಿ. ಉಚಿತವಾಗಿ ಕೊಡುತ್ತೀವಿ ಅಂದರೆ ಬಿಜೆಪಿಯನ್ನೂ ನಂಬಬೇಡಿ ಎನ್ನುವ ಮೂಲಕ ಕಾಂಗ್ರೆಸ್, JDS ವಿರುದ್ಧ ನಡೆಸಿದ್ದಾರೆ.