ಮೈಸೂರು: ಮಾಧ್ಯಮದವರು ಬೀದಿ ನಾಯಿಗಳ ಬಗ್ಗೆ ವರದಿ ಮಾಡುವುದನ್ನು ನಿಲ್ಲಿಸಿ, ಬೀದಿ ನಾಯಿಗಳ ಸಮಸ್ಯೆ ಪರಿಹರಿಸಲು ನಮಗೆ ಅವಕಾಶ ಮಾಡಿಕೊಡಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಾಣಿ ಪ್ರಿಯರಿಂದಾಗಿ ನಾವು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಬೀದಿ ನಾಯಿಗಳು ತಮ್ಮ ಮಕ್ಕಳನ್ನು ಕಚ್ಚಿದಾಗ ಅವರಿಗೆ ಸಮಸ್ಯೆಯ ಅರಿವಾಗುತ್ತದೆ ಎಂದರು.
ಬೀದಿ ನಾಯಿಗಳಿಗೆ ಆಹಾರ ನೀಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ, ಆ ಕೆಲಸವನ್ನು ಅವರು ಅಂದುಕೊಳ್ಳುವಂತೆ ದೊಡ್ಡ ಸಾಮಾಜಿಕ ಸೇವೆಯೂ ಅಲ್ಲ. ಸಮಸ್ಯೆ ಬಗೆಹರಿಸಲು ಬೀದಿ ನಾಯಿಗಳನ್ನು ಕೊಲ್ಲಬೇಕು’ ಎಂದು ಅಭಿಪ್ರಾಯಪಟ್ಟರು.
”ಸುಪ್ರೀಂ ಕೋರ್ಟ್ ಆದೇಶವಿರುವುದರಿಂದ ಬೀದಿ ನಾಯಿಗಳನ್ನು ಕೊಲ್ಲುವಂತಿಲ್ಲ. ಬೀದಿನಾಯಿಗಳನ್ನು ಕೊಂದಾಗ ನಮ್ಮದೇ ಪಕ್ಷದ ನಾಯಕರು ಸಮಸ್ಯೆ ಸೃಷ್ಟಿಸುತ್ತಾರೆ. ಮಾಧ್ಯಮಗಳು ಕೂಡ ಬೀದಿ ನಾಯಿಗಳ ಮೇಲಿನ ದಾಳಿಯ ಘಟನೆಗಳನ್ನು ಚರ್ಚೆಗೆ ತೆಗೆದುಕೊಳ್ಳುತ್ತವೆ ಎಂದರು.
ತೆಲಂಗಾಣದಲ್ಲಿ ಬೀದಿ ನಾಯಿಗಳ ಹಿಂಡು ಐದು ವರ್ಷದ ಮಗುವನ್ನು ಕೊಂದು ಹಾಕಿದ ಭೀಕರ ಘಟನೆ ನೆನಪಿಸಿಕೊಂಡು, ಮೈಸೂರಿನಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.