ಹಾಸನ: ವಿಧಾನಸಭಾ ಚುನಾವಣೆಯಲ್ಲಿ ಗೆಲುವು ನನ್ನದೇ ಎಂದು ಶಾಸಕ ಪ್ರೀತಂ ಗೌಡ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿ, ಜೆಡಿಎಸ್ ನಾಯಕರು ಹಾಗೂ ಇಡೀ ಕುಟುಂಬವೇ ಬಂದು ನನ್ನ ಮೇಲೆ ಸವಾರಿ ಮಾಡಿದರೂ ಹಾಸನದ ಜನತೆ ನನ್ನನ್ನೇ ಆಶೀರ್ವದಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ನನ್ನ ಅವಧಿಯಲ್ಲಿ ಸಾಧ್ಯವಾದಷ್ಟುಅಭಿವೃದ್ಧಿ ಕೆಲಸ ಮಾಡಲಾಗಿದ್ದು, ಇನ್ನಷ್ಟು ಅಭಿವೃದ್ಧಿಗೆ ಪ್ರೀತಂ ಗೌಡ ನನ್ನು ಆಯ್ಕೆ ಮಾಡಬೇಕೆಂದು ಬಹುತೇಕ ಮತದಾರರು ತೀರ್ಮಾನ ಮಾಡಿದ್ದು, ಮತ್ತೊಮ್ಮೆ ಗೆದ್ದು ಬರುತ್ತೇನೆ ಎಂದರು. ಯಾರೋ ಊರು ಬಿಡಿಸ್ತೀನಿ ಅಂದಿದ್ದರು. ಅವರು ಯೋಚನೆ ಮಾಡಿ ಮಾತಾಡುವಂತೆ ಚುನಾವಣೆ ಫಲಿತಾಂಶ ಬರುತ್ತದೆ. ಆ ಬಳಿಕ ಯಾರ‍್ಯಾರು ಎಲ್ಲೆಲ್ಲಿ ಇರ್ತಾರೆ ನೋಡಿ ಎಂದಿದ್ದಾರೆ.
ಜಾತಿ, ಮತ ಮೀರಿ ಅಭಿವೃದ್ಧಿ ಪರ ಜನರು ಮತ ಚಲಾಯಿಸಿದ್ದಾರೆ. ಬಹುತೇಕ ವರ್ಗದ ಜನ ನನಗೆ ಬೆಂಬಲ ನೀಡಿದ್ದು, ನಾನೇ ಗೆಲ್ಲುವೆ , ಮತದಾನದ ಶೇಕಡವಾರು ಲೆಕ್ಕ ಬರೆದಂತೆಲ್ಲಾ ಜಾಸ್ತಿ ಆಗ್ತಾ ಇದೆ, ಹಾಗಾಗಿ ಪೂರ್ಣ ಲೆಕ್ಕ ಹಾಕಿಲ್ಲ. ಹಾಸನಾಂಬೆ ಆಶೀರ್ವಾದದಿಂದ ಯಾರೂ ಊಹೆ ಮಾಡಿರದ ರೀತಿ ಹಾಸನದ ಫಲಿತಾಂಶ ಬರಲಿದೆ ಎಂದರು.