ಧಾರವಾಡ: ಮಾಜಿ ಶಾಸಕ ಕೋನರೆಡ್ಡಿ ಪರ ಪತ್ನಿ ಪ್ರೇಮಾ ಕೋನರೆಡ್ಡಿ ಪ್ರಚಾರ ಕಾರ್ಯ ಶುರು ಮಾಡಿ ಕೊಂಡಿದ್ದಾರೆ. ನವಲಗುಂದ ವಿಧಾನಸಭಾ ಕ್ಷೇತ್ರಕ್ಕೆ ಇನ್ನೂ ಕಾಂಗ್ರೆಸ್ ಟಿಕೆಟ್ ಹಂಚಿಕೆಯಾಗಿಲ್ಲ, ಆದರೆ ಟಿಕೆಟ್ ಅನೌನ್ಸ್ ಗೂ ಮೊದಲೇ ಪ್ರಚಾರ ಶುರುವಾಗಿದೆ.
ಕಳೆದ ಬಾರಿ ಜೆಡಿಎಸ್‌ನಿಂದ ಕಣಕ್ಕೆ ಇಳಿದಿದ್ದರು. ಇದೀಗ ನವಲಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಕೋನರೆಡ್ಡಿ ಹಾಗೂ ವಿನೋದ ಅಸೂಟಿ ನಡುವೆ ಫೈಟ್ ಜೋರಾಗಿದೆ. ಕೋನರೆಡ್ಡಿ ಬೆಂಗಳೂರಿನಲ್ಲಿ ಠಿಕಾಣಿ ಹೂಡಿದರೆ, ಅವರ ಪತ್ನಿ ಪ್ರಚಾರದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
ಮೂರನೇ ಪಟ್ಟಿಯಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂದು ನಿರ್ಧಾರ ಮಾಡಲಾಗುತ್ತದೆ. ಇದರ ಬೆನ್ನಲ್ಲೇ ವಾಹನಕ್ಕೆ ಪೂಜೆ ಸಲ್ಲಿಸಿ ಪ್ರಚಾರ ಆರಂಭ ಮಾಡಿರುವುದು ಚರ್ಚೆ ನಡೆದಿದೆ. ಇನ್ನೂ ವಿಳಂಬ ಆಗುತ್ತಿರುವ ಟಿಕೆಟ್ ಘೋಷಣೆಯಿಂದ ಎಚ್ಚೆತ್ತುಕೊಂಡ ಜಿಲ್ಲೆಯ ಕಾಂಗ್ರೆಸ್ ಮತ್ತು ಬಿಜೆಪಿ ಆಕಾಂಕ್ಷಿಗಳು ಇಂದು ಮತ ಪ್ರಚಾರ ನಡೆಸಿದ್ದಾರೆ.
ಟಿಕೆಟ್ ಘೋಷಣೆಗೂ ಮುನ್ನವೇ ಮೂವರು ಆಕಾಂಕ್ಷಿಗಳು ಒಟ್ಟಿಗೆ ಸೇರಿ ಪ್ರಚಾರ ಕಾರ್ಯ ಆರಂಭಿಸಿದ್ದು, ಕಾರ್ಯಕರ್ತರ ಹುಬ್ಬೇರಿಸಿದೆ, ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ವಿಭಿನ್ನವಾಗಿ ಆಕಾಂಕ್ಷಿಗಳು ಒಂದೇ ಪ್ರಚಾರ ರಥದಲ್ಲಿ ಮತ ಯಾಚನೆ ಮಾಡಿದ್ದಾರೆ.