ನವದೆಹಲಿ: ಇಸ್ರೋದ ಚಂದ್ರಯಾನ ಯೋಜನೆಯ ಬಳಿಕ ಸಂಸ್ಥೆಯು ಸೂರ್ಯ ಹಾಗೂ ಶುಕ್ರ ಗ್ರಹದತ್ತ ತೆರಳಲು ಸಿದ್ಧತೆ ನಡೆಸಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಚಂದ್ರಯಾನ್-3 ಯಶಸ್ಸನ್ನು ದೇಶವಷ್ಟೇ ಅಲ್ಲ ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ. ಇದು ನಮ್ಮ ದೇಶದ ಮತ್ತು ನಮ್ಮ ಯುವಕರ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದ್ದಾರೆ.
‘ಪ್ರಧಾನಿ ಮೋದಿ ಅವರು 8 ವರ್ಷಗಳಲ್ಲಿ ಸಾಧಿಸಿರುವುದು ಹಿಂದಿನ 60 ವರ್ಷಗಳಲ್ಲಿ ಮಾಡಿರಲು ಸಾಧ್ಯವಿಲ್ಲ. ಬಹುಕಾಲ ಚಾಲ್ತಿಯಲ್ಲಿದ್ದ ರಾಜವಂಶ ಮತ್ತು ತುಷ್ಟೀಕರಣ ರಾಜಕಾರಣದ ಕಪಿಮುಷ್ಠಿಯಿಂದ ದೇಶವನ್ನು ಮೋದಿ ಹೊರತಂದು ಅಭಿವೃದ್ಧಿ ಪಥದತ್ತ ಹೆಜ್ಜೆ ಹಾಕಿದರು. ಚಂದ್ರನ ಮೇಲೆ ಭಾರತ ಈಗ ತಮ್ಮ ಮುದ್ರೆ ಒತ್ತಿದೆ. ಮುಂದೆ ಸೂರ್ಯ ಹಾಗೂ ಶುಕ್ರನ ಕಡೆ ಇಸ್ರೋ ಗಮನ ಹರಿಸಲಿದೆ ಎಂದರು.
ಇದನ್ನೂ ಓದಿ: ಇಂದು 104ನೇ ‘ಮನ್ ಕಿ ಬಾತ್’ ಕಾರ್ಯಕ್ರಮ ಪ್ರಸಾರ!
ಸೂರ್ಯನ ಅಧ್ಯಯನಕ್ಕಾಗಿ ಇಸ್ರೋ ‘ಆದಿತ್ಯ-L1’ ಬಾಹ್ಯಾಕಾಶ ನೌಕೆಯ ತಯಾರಿಯಲ್ಲಿದೆ. ಮೂಲಗಳ ಪ್ರಕಾರ ಸೆಪ್ಟೆಂಬರ್‌ನಲ್ಲಿ ಉಡಾವಣೆಯಾಗುವ ಸಂಭವವಿದೆ ಎನ್ನಲಾಗಿದೆ. ಸೂರ್ಯನ ಮೇಲ್ಮೈ ಪದರ (ಸೌರ ಕೊರೊನಾದ) ವೀಕ್ಷಣೆಗಾಗಿ ನೌಕೆ ಸಿದ್ಧಗೊಳ್ಳುತ್ತಿದೆ. ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿ.ಮೀ ದೂರದಲ್ಲಿರುವ ಸೂರ್ಯನ ತಲುಪಲು ಈ ನೌಕೆ ಬರೋಬ್ಬರಿ 4 ತಿಂಗಳ ಕಾಲ ಸಮಯ ತೆಗೆದುಕೊಳ್ಳಲಿದೆ.
ಶ್ರೀಹರಿಕೋಟಾದಿಂದ ಇಸ್ರೋದ PSLV ರಾಕೆಟ್ ಮೂಲಕ ಆದಿತ್ಯ-L1 ಮಿಷನ್ ಅನ್ನು ಉಡಾವಣೆ ಮಾಡಲಾಗುವುದು. ಬಳಿಕ ಬಾಹ್ಯಾಕಾಶ ನೌಕೆಯನ್ನು ಆನ್-ಬೋರ್ಡ್ ಪ್ರೊಪಲ್ಷನ್ ಬಳಸಿ L1 ಪಾಯಿಂಟ್‌ಗೆ ಉಡಾಯಿಸಲಾಗುತ್ತದೆ. ಈ L1 ಪೇಲೋಡ್‌ಗಳನ್ನು ದೇಶೀಯವಾಗಿ ನಿರ್ಮಿಸಲಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.