ಬೆಂಗಳೂರು : ದೇವಸ್ಥಾನದಲ್ಲಿ ಅರ್ಚಕರು, ಪುರೋಹಿತರು ಮೊಬೈಲ್ ಬಳಕೆ ಸಂಪೂರ್ಣ ನಿಷೇಧಿಸಬೇಕು ಎಂದು ಪುರೋಹಿತರು ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಮನವಿ ಮಾಡಿದ್ದಾರೆ.
ವಿಕಾಸಸೌಧದಲ್ಲಿ ನಡೆದ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮನವಿ ಮಾಡಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಸಂಪೂರ್ಣ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜೊಲ್ಲೆ ತಿಳಿಸಿದ್ದಾರೆ.
ಅರ್ಚಕರು ದೇವಸ್ಥಾನದಲ್ಲಿ ಪೂಜೆ ಮಾಡುವ ಹಿನ್ನಲೆ ಭಕ್ತಿಭಾವದಿಂದ ಪೂಜೆ ಮಾಡುವುದಕ್ಕೆ ಅಡಚಣೆಯಾಗಬಹುದು. ತಜ್ಞರ ಜೊತೆ ಮಾತನಾಡಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ಎಂದು ತಿಳಿಸಿದ್ದಾರೆ. ಪೂಜಾ ಕಾರ್ಯ ಮಧ್ಯೆ ಅನಗತ್ಯ ಕಿರಿಕಿರಿ ತಪ್ಪಿಸುವ ದೇವಸ್ಥಾನದ ಗಾಂಭೀರ್ಯ ಕಾಪಾಡುವ ನಿಟ್ಟಿನಲ್ಲಿ ರಾಜ್ಯದ ಹಲವು ದೇವಸ್ಥಾನಗಳಲ್ಲಿ ದೇವಸ್ಥಾನ ಕಮಿಟಿಗಳೇ ಅರ್ಚಕರು, ಪುರೋಹಿತರು ಸೇರಿದಂತೆ ಗರ್ಭಗುಡಿ, ದೇವರ ಸೇವಾ ಕಾರ್ಯದಲ್ಲಿ ಮೊಬೈಲ್ ಬಳಸದಂತೆ ನಿಯಮ ಜಾರಿಗೊಳಿಸಿವೆ.
ಇದೇ ಮಾದರಿಯನ್ನು ಮುಜರಾಯಿ ಇಲಾಖೆ ತಮ್ಮ ವ್ಯಾಪ್ತಿಯ ಎಲ್ಲಾ ದೇವಸ್ಥಾನಗಳಲ್ಲಿ ಜಾರಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.