Sunday, October 1, 2023
spot_img
- Advertisement -spot_img

‘ಯಶೋಭೂಮಿ’ ಕನ್ವೆನ್ಷನ್ ಸೆಂಟರ್ ಉದ್ಘಾಟಿಸಿದ ಪ್ರಧಾನಿ ಮೋದಿ

ನವದೆಹಲಿ : ನಗರದ ದ್ವಾರಕಾದಲ್ಲಿ ‘ಯಶೋಭೂಮಿ’ ಹೆಸರಿನ ಇಂಡಿಯಾ ಇಂಟರ್‌ ನ್ಯಾಶನಲ್ ಕನ್ವೆನ್ಷನ್ ಸೆಂಟರ್ (ಐಐಸಿಸಿ)ಯ ಮೊದಲ ಹಂತವನ್ನು ತಮ್ಮ ಜನ್ಮ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು.

ಬರೋಬ್ಬರಿ 1.07 ಲಕ್ಷ ಚದರ ಮೀಟರ್ ಗಿಂತಲೂ ದೊಡ್ಡದಾದ ಅತ್ಯಾಧುನಿಕ ಯಶೋಭೂಮಿ ಕನ್ವೆನ್ಷನ್ ಸೆಂಟರ್ ವಸ್ತು ಪ್ರದರ್ಶನ, ವ್ಯಾಪಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಳಸುವ ಉದ್ದೇಶದಿಂದ ನಿರ್ಮಿಸಲಾಗಿದೆ.

ಯಶೋಭೂಮಿ ಕನ್ವೆನ್ಷನ್ ಸೆಂಟರ್ ಏಕಕಾಲಕ್ಕೆ 11,000 ಜನರು ಕುಳಿತುಕೊಳ್ಳುವಷ್ಟು ಆಸನ ಸಾಮರ್ಥ್ಯ ಹೊಂದಿದೆ. ಇದು 15 ಕನ್ವೆನ್ಷನ್ ಕೊಠಡಿಗಳು, ಗ್ರ್ಯಾಂಡ್ ಬಾಲ್ ರೂಂ ಮತ್ತು 13 ಸಭಾ ಕೊಠಡಿಗಳನ್ನುಒಳಗೊಂಡಿದೆ. ಕನ್ವೆನ್ಷನ್ ಸೆಂಟರ್ ಮುಖ್ಯ ಸಭಾಂಗಣವು 6,000 ಜನರ ಆಸನ ಸಾಮರ್ಥ್ಯವನ್ನು ಹೊಂದಿದೆ. ಗ್ರ್ಯಾಂಡ್ ಬಾಲ್ ರೂಂ ಹೆಚ್ಚುವರಿ 2,500 ಜನರಿಗೆ ಆಸನ ವ್ಯವಸ್ಥೆ ಹೊಂದಿದೆ. 500 ಜನರು ಕುಳಿತುಕೊಳ್ಳಬಹುದಾದ ವಿಸ್ತೃತ ತೆರೆದ ಪ್ರದೇಶವೂ (ಓಪನ್ ಏರಿಯಾ) ಇದೆ.

ಕನ್ವೆನ್ಷನ್ ಸೆಂಟರ್ ಉದ್ಘಾಟನೆಗೂ ಮೊದಲು ಪ್ರಧಾನಿ ಮೋದಿ ಇಂದು ದ್ವಾರಕಾ ಸೆಕ್ಟರ್ 21ರಿಂದ ದ್ವಾರಕಾ ಸೆಕ್ಟರ್ 25ರವರೆಗಿನ ಏರ್ ಪೋರ್ಟ್ ಮೆಟ್ರೋ ಎಕ್ಸ್ ಪ್ರೆಸ್ ವಿಸ್ತರಣೆ ಕಾಮಗಾರಿಯನ್ನೂ ಉದ್ಘಾಟಿಸಿದರು. ದ್ವಾರಕಾ ಸೆಕ್ಟರ್ 25ರ ಯಶೋಭೂಮಿ ಹೊಸ ಭೂಗತ (ಅಂಡರ್ ಗ್ರೌಂಡ್ ) ಮೆಟ್ರೋ ನಿಲ್ದಾಣ ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಟರ್ಮಿನಲ್ 3 ಮತ್ತು ದೆಹಲಿ ವಿಮಾನ ನಿಲ್ದಾಣಗಳಿಗೆ ನೇರ ಸಂಪರ್ಕ ಕಲ್ಪಿಸುತ್ತದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles