ನವದೆಹಲಿ : ‘ವಿಶ್ವಕರ್ಮ ಜಯಂತಿ’ಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಸಾಂಪ್ರದಾಯಿಕ ಕುಶಲಕರ್ಮಿಗಳ ಅನುಕೂಲಕ್ಕಾಗಿ ‘ಪಿಎಂ ವಿಶ್ವಕರ್ಮ’ ಯೋಜನೆಗೆ ಇಂದು (ಭಾನುವಾರ) ಚಾಲನೆ ನೀಡಿದರು.
ಬಳಿಕ ಮಾತನಾಡಿದ ಪ್ರಧಾನಿ, ವಿಶ್ವಕರ್ಮ ಯೋಜನೆಯಡಿ ಸರ್ಕಾರವು ಯಾವುದೇ (ಬ್ಯಾಂಕ್) ಗ್ಯಾರಂಟಿ ಇಲ್ಲದೆ ₹ 3 ಲಕ್ಷದವರೆಗೆ ಸಾಲ (ಲೋನ್) ನೀಡಲಿದೆ. ಇದರ ಬಡ್ಡಿ ದರವೂ ತುಂಬಾ ಕಡಿಮೆಯಾಗಿದೆ. ಆರಂಭದಲ್ಲಿ ₹ 1 ಲಕ್ಷ ಸಾಲ ನೀಡಲಾಗುವುದು ಮತ್ತು ಅದನ್ನು ಮರುಪಾವತಿಸಿದಾಗ ಮತ್ತೆ ₹ 2 ಲಕ್ಷ ಹೆಚ್ಚುವರಿ ಸಾಲ ನೀಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ : ‘ಯಶೋಭೂಮಿ’ ಕನ್ವೆನ್ಷನ್ ಸೆಂಟರ್ ಉದ್ಘಾಟಿಸಿದ ಪ್ರಧಾನಿ ಮೋದಿ
ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ವಿಶ್ವಕರ್ಮ ಯೋಜನೆ ಘೋಷಿಸಿದ್ದರು.
ಯೋಜನೆಗೆ ನೋಂದಣಿ ಹೇಗೆ? ಪಿಎಂ ವಿಶ್ವಕರ್ಮ ಯೋಜನೆಯಡಿ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಸರ್ಕಾರ ತರಬೇತಿ, ಸಾಲ ಒದಗಿಸಲಿದೆ. ಕರಕುಶಲತೆಯಲ್ಲಿ ತೊಡಗಿರುವವರು ಪಿಎಂ ವಿಶ್ವಕರ್ಮ ಯೋಜನೆಯ ಪೋರ್ಟಲ್ ನಲ್ಲಿ ಬಯೋಮೆಟ್ರಿಕ್ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಂಡ ನುರಿತ ಕುಶಲಕರ್ಮಿಗಳಿಗೆ ಕೇಂದ್ರ ಸರ್ಕಾರ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ಒದಗಿಸಲಿದೆ. ಅಲ್ಲದೆ, ಪ್ರಾಥಮಿಕ ತರಬೇತಿ ನೀಡಲಿದೆ. ತರಬೇತಿ ವೇಳೆ 15 ಸಾವಿರ ರೂಪಾಯಿ ಗೌರವಧನ ನೀಡಲಿದೆ. ಬಳಿಕ ಸ್ವ ಉದ್ಯೋಗ ಪ್ರಾರಂಭಿಸಲು ಸಾಲ ಸೌಲಭ್ಯ ಒದಗಿಸಲಿದೆ.
ಯಾರು ಯೋಜನೆ ಅರ್ಹರು? ಕುಂಬಾರ, ಬಡಗಿ, ಕಮ್ಮಾರ, ಅಕ್ಕಸಾಲಿಗ, ಬುಟ್ಟಿ ಹೆಣೆಯುವವರು, ನೇಕಾರರು, ಕ್ಷೌರಿಕರು, ಅಕ್ಕಾಸಾಲಿಗರು, ಚಮ್ಮಾರರು, ದರ್ಜಿ ಸೇರಿದಂತೆ 18 ಕುಶಲಕರ್ಮಿಗಳು ವಿಶ್ವಕರ್ಮ ಯೋಜನೆಯ ಲಾಭ ಪಡೆಯಬಹುದು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.