ಬೆಂಗಳೂರು : ಜೈ ಜವಾನ್ ಜೈ ಕಿಸಾನ್, ಜೈ ವಿಜ್ಞಾನ ಜೈ ಅನುಸಂಧಾನ ಎಂದು ಪ್ರಧಾನಿ ನರೇಂದ್ರ ಮೋದಿ ಇಸ್ರೋ ವಿಜ್ಞಾನಿಗಳನ್ನು ಹಾಡಿ ಹೊಗಳಿದ್ದಾರೆ.
ಇಸ್ರೋಗೆ ಅಭಿನಂದನೆ ಸಲ್ಲಿಸಲು ನಗರಕ್ಕೆ ಆಗಮಿಸಿರುವ ಅವರು ಹೆಚ್‌ಎಲ್ ವಿಮಾನ ನಿಲ್ದಾಣದ ಬಳಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ದೇಶ ಇಂದು ಬೆಳಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರಿನಲ್ಲಿ ಅದು ಕಾಣುತ್ತಿದೆ. ಗ್ರೀಸ್,ಜೋಹಾನ್ಸ್‌ಬರ್ಗ್‌ನಲ್ಲಿ ಅದು ಕಾಣುತ್ತಿದೆ ಎದು ಸಂತಸ ಹಂಚಿಕೊಂಡರು. ಇದು ಸೂರ್ಯೋದಯದ ಸಂದರ್ಭ,ಬೆಂಗಳೂರಿನಲ್ಲಿ ಸುಂದರ ಚಿತ್ರಣ ಇದೆ ಇವತ್ತು ಇಷ್ಟೊಂದು ಜನ ಬಂದಿದ್ದೀರಾ,ವಿಜ್ಞಾನಿಗಳ ಸಾಧನೆ ಎಲ್ಲರ ಹೆಮ್ಮೆ ಹೆಚ್ಚಿಸಿದೆ ಎಂದರು.
ವಿಜ್ಞಾನದಲ್ಲಿ ವಿಶ್ವಾಸ ಹೊಂದಿರುವ ಇಷ್ಟೊಂದು ಜನ ಉತ್ಸಾಹದಿಂದ ಇದ್ದಾರೆ ಎಂದು ಪ್ರಧಾನಿ ಹೇಳಿದರು.ಇಸ್ರೋ ಸಾಧನೆಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ, ಈ ಹಿನ್ನೆಲೆಯಲ್ಲಿ ಅವರ ಭೇಟಿಗಾಗಿ ಬಂದಿದ್ದೇನೆ ಎಂದು ತಿಳಿಸಿದರು.
ನಾನು ಆ ಎಲ್ಲ ವಿಜ್ಞಾನಿಗಳೊಂದಿಗೆ ಮಾತನಾಡಲು ನಾನು ತೀವೃ ಕಾತುರನಾಗಿದ್ದೇನೆ. ನಮ್ಮ ವಿಜ್ಞಾನಿಗಳ ಶಕ್ತಿ, ಸಾಮರ್ಥ್ಯ ಇಡೀ ಜಗತ್ತಿಗೆ ಅರಿವಾಗಿದೆ ಎಂದು ವಿಜ್ಞಾನಿಗಳನ್ನು ಶ್ಲಾಘಿಸಿದರು.
ವಿದೇಶಲ್ಲಿದ್ದಾಗಲೇ ವಿಜ್ಞಾನಿಗಳನ್ನು ಭೇಟಿಯಾಗುವ ಉತ್ಸುಕತೆ ಇತ್ತು ಹೀಗಾಗಿ ಸ್ಥಳೀಯ ಸರ್ಕಾರದ ಮುಖ್ಯಮಂತ್ರಿಗಳಿಗೆ ನಾನು ಭೇಟಿ ನೀಡುವ ಬಗ್ಗೆ ತಿಳಿಸಿದ್ದೆ. ನಾನು ಬೆಳಿಗ್ಗೆ ಬೇಗ ಬರುತ್ತಿದ್ದೇನೆ ನೀವು ಬರುವ ತೊಂದರೆ ತೆಗೆದುಕೊಳ್ಳುವುದು ಬೇಡ ಎದು ಮನವಿ ಮಾಡಿದ್ದೆ ಎಂದರು.
ಅದರಂತೆ ಪ್ರೊಟೋಕಾಲ್ ವ್ಯವಸ್ಥೆಯನ್ನು ಕೈಗೊಂಡಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರಿಗೆ ಕೃತಜ್ಞತೆಗಳನ್ನು ತಿಳಿಸುತ್ತೇನೆ ಎಂದು ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.