ಬೆಂಗಳೂರು: ಚಂದ್ರಯಾನ್-3 ಯೋಜನೆ ಯಶಸ್ವಿಗೆ ಕಾರಣರಾದ ವಿಜ್ಞಾನಿಗಳ ಅಭಿನಂದಿಸಲು ನಾಳೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ವೇಳೆ ಮೋದಿ ರೋಡ್ ಶೋ ನಡೆಸಲು ಬಿಜೆಪಿ ಸಿದ್ಧತೆ ನಡೆಸಿತ್ತು. ಆದ್ರೆ ಕೊನೆ ಗಳಿಗೆಯಲ್ಲಿ ಮೋದಿ ರೋಡ್ ಶೋ ರದ್ದಾಗಿದೆ.
ಪ್ರಧಾನಿ ಮೋದಿ ತೆರೆದ ವಾಹನದಲ್ಲಿ ತೆರಳಲಿದ್ದ ರೋಡ್ ಶೋ ರದ್ದುಗೊಳಿಸಲಾಗಿದೆ. ಎಸ್‌ಪಿಜಿಯಿಂದ ಅನುಮತಿ ಸಿಗದ ಹಿನ್ನೆಲೆ ರೋಡ್ ಶೋ ಕ್ಯಾನ್ಸಲ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಜಾಲಹಳ್ಳಿ ಸಮೀಪ ಮಾತ್ರ ಕಾರಿನಲ್ಲೇ ಕುಳಿತು ಜನರತ್ತ ಕೈಬೀಸಲಿದ್ದಾರೆ.
ಇದನ್ನೂ ಓದಿ: ‘ಕಾಂಗ್ರೆಸ್ ಸರ್ಕಾರಕ್ಕೆ ಅಭದ್ರತೆ ಕಾಡುತ್ತಿದೆ’
ಪೀಣ್ಯದಲ್ಲಿರುವ ಇಸ್ರೋ ಕಚೇರಿಗೆ ಪ್ರಧಾನಿ ಆಗಮಿಸಿ 1ಕಿ.ಮೀ.ನಷ್ಟು ದೂರ ರೋಡ್ ಶೋ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಮೋದಿ ಸ್ವಾಗತ ಮತ್ತು ರೋಡ್ ಶೋ ವೇಳೆ ಕಾರ್ಯಕರ್ತರು ರಾಷ್ಟ್ರಧ್ವಜ ಹಿಡಿದುಕೊಳ್ಳುವಂತೆ ತಿಳಿಸಲಾಗಿತ್ತು. ಜೊತೆಗೆ ರೋಡ್ ಶೋ ಹಿನ್ನೆಲೆ ಬದಲಿ ಮಾರ್ಗ ಬಳಕೆಗೂ ಸೂಚಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ರೋಡ್ ಶೋ ರದ್ದಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.