ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದಿನಿಂದ G20 ಶೃಂಗಸಭೆ ಆರಂಭವಾಗಿದೆ. ಇನ್ನು G20 ಒಕ್ಕೂಟಕ್ಕೆ ಆಫ್ರಿಕನ್ ಒಕ್ಕೂಟವನ್ನು ಸೇರ್ಪಡೆ ಮಾಡಿಕೊಂಡಿರುವುದಾಗಿ ಪ್ರಧಾನಿ ಮೋದಿ ಘೋಷಣೆ ಮಾಡಿದರು.
G20 ಶೃಂಗಸಭೆಯಲ್ಲಿ ಸ್ವಾಗತ ಭಾಷಣ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, G20 ಒಕ್ಕೂಟಕ್ಕೆ ಆಫ್ರಿಕನ್ ಒಕ್ಕೂಟದ ಸೇರ್ಪಡೆ ಬಗ್ಗೆ ಘೋಷಿಸಿದರು.
ಈ ಮೂಲಕ G20 ಒಕ್ಕೂಟದ 21ನೇ ದೇಶವಾಗಿ ಆಫ್ರಿಕನ್ ಒಕ್ಕೂಟ ಸೇರಿಕೊಂಡಿದೆ. ಈ ಮೂಲಕ ಆಫ್ರಿಕನ್ ಯೂನಿಯನ್ ಖಾಯಂ ಸದಸ್ಯ ಎಂದು ಒಪ್ಪಿಕೊಳ್ಳಲಾಗಿದೆ.


ಈ ಬಗ್ಗೆ ಶೃಂಗಸಭೆಯಲ್ಲಿ ಭಾಷಣ ಮಾಡಿದ ಮೋದಿ, ನಿಮ್ಮೆಲ್ಲರ ಒಪ್ಪಿಗೆಯೊಂದಿಗೆ ಆಫ್ರಿಕನ್ ಯೂನಿಯನ್ ಇಂದಿನಿಂದ ಜಿ20 ಖಾಯಂ ಸದಸ್ಯತ್ವ ಪಡೆಯಲಿದೆ ಎಂದು ಘೋಷಿಸಿದರು. ಇದಕ್ಕೆ ಎಲ್ಲ ನಾಯಕರು ಚಪ್ಪಾಳೆ ತಟ್ಟುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.
ಇದನ್ನೂ ಓದಿ: ಇಂದಿನಿಂದ ‘G20’ ಶೃಂಗಸಭೆ ; ದೆಹಲಿಯಲ್ಲಿ ದಿಗ್ಗಜರ ದಂಡು!
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಆಫ್ರಿಕನ್ ಯೂನಿಯನ್ ಅಧ್ಯಕ್ಷ ಅಜಾಲಿ ಅಸ್ಸೌಮಾನಿ ಅವರನ್ನು ವೇದಿಕೆಗೆ ಕರೆತಂದರು ಮತ್ತು ಪ್ರಧಾನಿ ಮೋದಿ ಅವರನ್ನು ತಬ್ಬಿ ಅಭಿನಂದಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.