ಮಂಡ್ಯ : ಕಾಂಗ್ರೆಸ್ ಪಕ್ಷ ರೈತರ ಹತ್ತಿರ ಯಾವತ್ತು ಬಂದಿಲ್ಲ. ರೈತರ ಹತ್ತಿರ ಬಂದು ಸಮಸ್ಯೆಗಳ ಕೇಳಿದ್ದು ಪ್ರಧಾನಿ ನರೇಂದ್ರ ಮೋದಿಯವರು ಮಾತ್ರ ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಶ್ರೀರಂಗಪಟ್ಟಣದ ಟಿಎಪಿಸಿಎಂಸಿ ಆವರಣದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಮಾತನಾಡಿ, ಪ್ರತಿ ರೈತರ ಕುಟುಂಬಕ್ಕೆ 10 ಸಾವಿರ ಕೊಡಲಾಗಿದೆ.ಆಯುಷ್ಮಾನ್ ಕಾರ್ಡ್ ಜನರಿಗೆ ಕೊಟ್ಟಿದ್ದು ನರೇಂದ್ರ ಮೋದಿಯವರು. 30 ಲಕ್ಷ ಕುಟುಂಬಕ್ಕೆ ಉಜ್ವಲ ಯೋಜನೆಯಲ್ಲಿ ಸಿಲಿಂಡರ್ ಕೊಟ್ಟಿದ್ದು ಕೇಂದ್ರ ಸರ್ಕಾರ. ಕೇಂದ್ರ ಸರ್ಕಾರ ಜನರಿಗೆ ಯೋಜನೆಗಳನ್ನ ತಲುಪಿಸಿದೆ ಎಂದರು.
ಕರೋನಾ ಸಂದರ್ಭದಲ್ಲಿ ಪ್ರಧಾನಿ ಮೋದಿ ಜೀ ತೆಗೆದುಕೊಂಡ ನಿರ್ಧಾರಕ್ಕೆ ವಿಶ್ವದ ನಾಯಕರು ಮೆಚ್ಚಿದ್ದಾರೆ. ನಮ್ಮ ದೇಶದಲ್ಲಿ ಕೊರೊನಾ ಔಷಧಿ ಕಂಡುಹಿಡಿದರು. ದೇಶದ ನೂರು ಕೋಟಿಗೂ ಹೆಚ್ಚು ಜನರಿಗೆ ಉಚಿತ ಲಸಿಕೆ ಕೊಟ್ಟರು, ಬೇರೆ ರಾಷ್ಟ್ರಕ್ಕೂ ನಮ್ಮ ಪ್ರಧಾನಿ ಲಸಿಕೆ ಕೊಟ್ಟರು ಎಂದರು. ಬರುವ ವಿಧಾನ ಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಎಲ್ಲ ಏಳು ಕ್ಷೇತ್ರಗಳಲ್ಲಿ ಕಮಲ ಅರಳಲಿದೆ,
ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯನ್ನು ಮತ್ತಷ್ಟು ಸಧೃಡ ಮಾಡಬೇಕು ಎಂದರು. ಕರೋನಾ ಸಂದರ್ಭದಲ್ಲಿ ಪ್ರಧಾನಿ ಮೋದಿ ಜೀ ತೆಗೆದುಕೊಂಡ ನಿರ್ಧಾರಕ್ಕೆ ವಿಶ್ವದ ನಾಯಕರು ಮೆಚ್ಚಿದ್ದಾರೆ. ಕೆ.ಆರ್.ಪೇಟೆಯಲ್ಲಿ ಖಾತೆ ತೆರೆದಿದ್ದೇವೆ, ಮುಂದೆಯು ಸಹ 4 ರಿಂದ 5 ಖಾತೆ ತೆರೆಯುತ್ತೇವೆ.ಯಾವುದೇ ಕ್ಷೇತ್ರ ಬಿಡದೆ, ರಾಜ್ಯಾದ್ಯಂತ ಪ್ರವಾಸ ಮಾಡಲಾಗುವುದು ಎಂದು ಹೇಳಿದರು.