ಬೆಂಗಳೂರು : ಬಾಹ್ಯಾಕಾಶದಲ್ಲಿ ಇಸ್ರೋ ಮಹತ್ತರ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ವಿಜ್ಞಾನಿಗಳನ್ನು ಭೇಟಿಯಾಗಲು ನಗರಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಮೂರು ಗಂಟೆಗಳ ಪ್ರವಾಸದ ಬಳಿಕ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಪೀಣ್ಯದ ಇಸ್ರೋ ಕಚೇರಿಯಿಂದ ತೆರಳುವ ಮಾರ್ಗ ಮಧ್ಯೆ ರಸ್ತೆಯುದ್ದಕ್ಕೂ ನೆರೆದಿದ್ದ ಸಾವಿರಾರು ಜನರತ್ತ ಕೈ ಬೀಸಿದಾಗ ಮೋದಿ, ಮೋದಿ ಎಂಬ ಘೋಷಣೆಗಲ್ಲನ್ನು ಕೂಗಿ ಜನರು ಸಂತಸಪಟ್ಟರು, ಬಳಿಕ ಏರ್ಪೋಟ್‌ನತ್ತ ಮೋದಿ ತೆರಳಿದರು.
ಇದನ್ನೂ ಓದಿ : ವಿಕ್ರಮ್ ಲ್ಯಾಂಡರ್ ಚಂದ್ರನಲ್ಲಿ ಇಳಿದ ಸ್ಥಳ ಶಿವಶಕ್ತಿ ಕೇಂದ್ರ : ಪ್ರಧಾನಿ ಘೋಷಣೆ
ಬಿಜೆಪಿ ನಾಯಕರಿಗೆ ಮೋದಿ ನಿರಾಸೆ..
ಗಮನಾರ್ಹವಾದ ಅಂಶವೆಂದರೆ ಚಂದ್ರಯಾನ-3ರ ಯಶಸ್ಸಿಗೆ ಅಭಿನಂದನೆ ಸಲ್ಲಿಕೆಗೆ ಆಗಮಿಸಿದ್ದ ಪ್ರಧಾನಿ ಮೋದಿಯವರು ರಾಜ್ಯ ಬಿಜೆಪಿ ನಾಯಕರನ್ನು ಭೇಟಿಯಾಗದೆ ನಿರ್ಗಮಿಸಿದ್ದಾರೆ.
ರಾಜಕೀಯಕ್ಕಾಗಿ ಇಂದಿನ ಪ್ರವಾಸವನ್ನು ಬಳಸಿಕೊಳ್ಳದ ಪ್ರಧಾನಿ ಮೋದಿ ಸೌಜನ್ಯಕ್ಕೂ ಬಿಜೆಪಿ ನಾಯಕರನ್ನು ಕಾಣಲಿಲ್ಲ. ಪ್ರಧಾನಿಯವರು ಭೇಟಿಯಾಗಬಹುದೆಂಬ ನಿರೀಕ್ಷೆಯಲ್ಲಿದ್ದ ನಾಯಕರಿಗೆ ಮೋದಿ ನಿರಾಸೆ ಮೂಡಿಸಿ ಹೊರಟಿದ್ದಾರೆ.
ಲೋಕಸಭಾ ಚುನಾವಣೆಗೆ ಈಗಿನಿಂದಲೇ ಮೋದಿ ಹೆಸರಲ್ಲಿ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದ ಬಿಜೆಪಿ ನಾಯಕರಿಗೆ ಭಾರೀ ಹಿನ್ನಡೆಯಾಗಿದೆ.
ಕೇವಲ ರಾಜ್ಯದ ಸಂಸದರು ಹಾಗೂ ಬಿಜೆಪಿ ನಾಯಕರು ಜನ ಸಾಮಾನ್ಯರಂತೆ ಬ್ಯಾರಿಕೇಡ್ ಒಳಗೆಯೇ ನಿಂತು ಪ್ರಧಾನಿಯವರನ್ನು ಕಣ್ತುಂಬಿಕೊಂಡಿದ್ದಾರೆ ಆದರೆ ಅವರಿಗೆ ಮೋದಿ ಭೇಟಿ ಸಾಧ್ಯವಾಗಲಿಲ್ಲ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.