ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದಿಂದ ಬಂದ್ ಗೆ ಕರೆ ನೀಡಿರುವ ಹಿನ್ನಲೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAL) ಟ್ಯಾಕ್ಸಿಗಳ ಸಂಖ್ಯೆ ವಿರಳವಾಗಿದೆ. ಬಂದ್ ಹಿನ್ನಲೆ ಪ್ರಯಾಣಿಕರಿಗೆ ತೊಂದರೆಯಾಗದಂತೆ ಏರ್‌ಪೋರ್ಟ್‌ನಿಂದ ಬೆಂಗಳೂರು ನಗರಕ್ಕೆ ಬಿಎಂಟಿಸಿ ವಾಯುವಜ್ರ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ; ಬಂದ್ ನಡುವೆ ಹೆಚ್ಚಾಯ್ತು ಬಿಎಂಟಿಸಿಗೆ ಬೇಡಿಕೆ
ಟ್ಯಾಕ್ಸಿ ಲಭ್ಯವಾಗದೇ ಇರುವುದರಿಂದ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ. ಏರ್ಪೋಟ್ ನಿಂದ ಬೆಂಗಳೂರಿನ ವಿವಿದೆಡೆಗೆ ಬಿಎಂಟಿಸಿ (BMTC) ವಾಯುವಜ್ರ ಬಸ್‌ಗಳ ಸಂಚಾರ ನಡೆಸಲಾಗ್ತಿದೆ. ಪ್ರಯಾಣಿಕರಿಗೆ ತೊಂದರೆಯಾಗದಂತೆ ಕೇಂದ್ರೀಯ ಬಿಎಂಟಿಸಿ ಡಿಸಿ ನಾಗರಾಜ್ ಮೂರ್ತಿ ಏರ್ಪೋರ್ಟ್‌ನಲ್ಲೆ ಬೀಡು ಬಿಟ್ಟಿದ್ದಾರೆ. 30 ಹೆಚ್ಚುವರಿ ಬಸ್‌ಗಳು ಒಡಾಟ ನಡೆಸುತ್ತಿದ್ದು, 100 ಟ್ರಿಪ್‌ಗಳನ್ನು ಹೆಚ್ಚಿಸಲಾಗಿದೆ. ಇಂದು ಒಂದೇ ದಿನ 900 ಕ್ಕೂ ಅಧಿಕ ಬಿಎಂಟಿಸಿ ಬಸ್‌ಗಳ ಟ್ರಿಪ್‌ಗಳನ್ನ ಆರಂಭಿಸಲಾಗಿದ್ದು, ಟ್ಯಾಕ್ಸಿಗಳಿಲ್ಲದೆ ಪ್ರಯಾಣಿಕರು ಬಿಎಂಟಿಸಿ ಬಸ್ ಮೊರೆ ಹೋಗುತ್ತಿದ್ದಾರೆ.


ಓಲಾ, ಊಬರ್ ಸೇವೆ ಲಭ್ಯವಿಲ್ಲದ ಕಾರಣಕ್ಕೆ ಬಿಎಂಟಿಸಿ ಬಸ್ ಗಳತ್ತ ಪ್ರಯಾಣಿಕರು ಮುಖ ಮಾಡಿದ್ದಾರೆ. ಏರ್ಪೋರ್ಟ್ ನಲ್ಲಿ ಪ್ರಯಾಣಿಕರಿಗಾಗಿ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಬಸ್‌ಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ವಿಮಾನ ನಿಲ್ದಾಣ ಪೋಲೀಸರು ಬೀಟ್ ಹೆಚ್ಚಿಸಿದ್ದಾರೆ.


ಟ್ಯಾಕ್ಸಿಗೆ ಕಲ್ಲು ತೂರಿದ ಕಿಡಿಗೇಡಿಗಳು:
ಬಂದ್ ಇದ್ದರೂ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದ ಕೆ.ಎಸ್.ಟಿ.ಡಿ.ಸಿ ಟ್ಯಾಕ್ಸಿ ಒಂದಕ್ಕೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಏರ್ಪೋರ್ಟ್ ರಸ್ತೆಯ ಚಿಕ್ಕಜಾಲ ಬಳಿ ಘಟನೆ ನಡೆದಿದೆ. ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಕಾರಿಗೆ ಕಲ್ಲು ತೂರಿದ್ದು, ಕಾರಿನ ಗ್ಲಾಸ್ ಪುಡಿಪುಡಿಯಾಗಿದೆ. ಇನ್ನು ಕಾರಿಗೆ ಕಲ್ಲು ತೂರಿದವ ವ್ಯಕ್ತಿಯನ್ನು ಚಿಕ್ಕಜಾಲ ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.