ಬೆಂಗಳೂರು : ನಿರ್ಮಾಪಕ ಕೆ. ಮಂಜು ರಾಜಕಾರಣಕ್ಕೆ ಎಂಟ್ರಿ ನೀಡುವ ಸೂಚನೆ ಸಿಕ್ಕಿದ್ದು, ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕನಾಗಿ ಕೆ. ಮಂಜು ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಂತೆ ಚರ್ಚಿಸಲು ಶೀಘ್ರದಲ್ಲೇ ಕೆಲವು ರಾಜಕೀಯ ಮುಖಂಡರ ಜೊತೆ ಮಾತುಕತೆ ನಡೆಸಲಿದ್ದಾರೆ.
ನಮ್ಮ ಕೆಲವು ನಾಯಕರನ್ನ ಭೇಟಿ ಮಾಡುತ್ತೇನೆ. ಶೀಘ್ರದಲ್ಲೇ ಎಲ್ಲವೂ ಫೈನಲ್ ಆಗುತ್ತದೆ. ಪದ್ಮನಾಭ ನಗರದಲ್ಲಿ ಒಕ್ಕಲಿಗರ ಮತಗಳು ಜಾಸ್ತಿ ಇವೆ. ನನಗೆ ಹಲವು ನಾಯಕರ ಬೆಂಬಲ ಸಿಗುವ ಸಾಧ್ಯತೆ ಇದೆ. ಪದ್ಮನಾಭ ನಗರದಲ್ಲಿ ಒಕ್ಕಲಿಗರ ಓಟ್ ಜಾಸ್ತಿ ಇವೆ. ಹೀಗಾಗಿ ಹಿರಿಯರ ಆಶೀರ್ವಾದ ಪಡೆದು ಚುನಾವಣೆಗೆ ಸ್ಪರ್ಧಿಸುತ್ತೇನೆ. ಹಲವು ವರ್ಷಗಳಿಂದ ಸಾಮಾಜಿಕ ಸೇವೆ ಮಾಡುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಕನ್ನಡ ಚಿತ್ರರಂಗದ ಹಲವು ಗಣ್ಯರು ರಾಜಕೀಯಕ್ಕೆ ಸೇರಿದ್ದು, ನಿರ್ಮಾಪಕ ಮಂಜು ಈಗ ರಾಜಕೀಯ ಸೇರಲು ಸಿದ್ಧತೆ ನಡೆಸುತ್ತಿದ್ದಾರೆ.