ಈಶ್ವರ್ ಖಂಡ್ರೆಕರ್ನಾಟಕ ಕಾಂಗ್ರೆಸ್ ನ ಪ್ರಮುಖ ನಾಯಕರಲ್ಲಿ ಒಬ್ಬರು. ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿಯಾಗಿರುವ ಖಂಡ್ರೆ, ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಾಲ್ಯ ಹಾಗೂ ವೃತ್ತಿ ಜೀವನ : ಈಶ್ವರ್ ಖಂಡ್ರೆ ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಮಾಜಿ ಸಚಿವ ಭೀಮಣ್ಣ ಖಂಡ್ರೆ ಮತ್ತು ಲಕ್ಷ್ಮೀ ಬಾಯಿ ದಂಪತಿಯ ಮಗನಾಗಿ 15 ಜನವರಿ 1961ರಂದು ಜನಿಸಿದರು. ಖಂಡ್ರೆ ಅವರು ಬೀದರ್ ನ ಶಾಂತಿವರ್ಧಕ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾಗಿದ್ದಾರೆ. ವೃತ್ತಿಯಲ್ಲಿ ಕೃಷಿಕರಾಗಿದ್ದಾರೆ ಮತ್ತು ಸಮಾಜ ಸೇವಾ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. 1985ರಲ್ಲಿ ಪೂಜ್ಯ ದೊಡ್ಡಪ್ಪ ಅಪ್ಪ ಕಾಲೇಜ್ ಆಫ್ ಇಂಜಿನಿಯರಿಂಗ್ ನಿಂದ (ಗುಲ್ಬರ್ಗಾ ವಿಶ್ವ ವಿದ್ಯಾಲಯ) ಈಶ್ವರ್ ಖಂಡ್ರೆ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದಾರೆ.


ರಾಜಕೀಯ ಜೀವನ : ಈಶ್ವರ್ ಖಂಡ್ರೆ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದ ಖಂಡ್ರೆ ಕುಟುಂಬದ ಮೂರನೇ ಸದಸ್ಯರಾಗಿದ್ದಾರೆ. ಇವರ ತಂದೆ ಭೀಮಣ್ಣ ಖಂಡ್ರೆ ನಾಲ್ಕು ಬಾರಿ ಬಾಲ್ಕಿ ಕ್ಷೇತ್ರದದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದರು. ಈಶ್ವರ್ ಖಂಡ್ರೆ ಸಹೋದರ ವಿಜಯ್ ಕುಮಾರ್ ಖಂಡ್ರೆ ಎರಡು ಬಾರಿ ಶಾಸಕರಾಗಿ ಚುನಾಯಿತರಾಗಿದ್ದರು.


- 2004 ರಲ್ಲಿ ಮೊದಲ ಬಾರಿಗೆ ಬೀದರ್ ಜಿಲ್ಲೆ ಭಾಲ್ಕಿ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧೆ- ಸೋಲು (ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ವಿರುದ್ದ 9 ಸಾವಿರ ಮತಗಳ ಅಂತರದಿಂದ ಸೋಲು)
- 2008ರಲ್ಲಿ ವಿಧಾಸನಭೆ ಚುನಾವಣೆಗೆ ಸ್ಪರ್ಧೆ- ಗೆಲುವು. ಮೊದಲ ಬಾರಿ ವಿಧಾನಸಭೆಗೆ ಪ್ರವೇಶ. (ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ವಿರುದ್ದ 20 ಸಾವಿರ ಮತಗಳ ಅಂತರದಿಂದ ಜಯ)
- 2013ರ ವಿಧಾನಸಭೆ ಚುನಾವಣೆ ಸ್ಪರ್ಧಿಸಿ ಎರಡನೇ ಬಾರಿಗೆ ಗೆಲುವು. (9 ಸಾವಿರ ಮತಗಳ ಅಂತರದಿಂದ ಗೆಲುವು)
- 2016- 2018ರ ಅವಧಿಯಲ್ಲಿ ಪೌರಾಡಳಿತ, ಸ್ಥಳೀಯ ಸಂಸ್ಥೆ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವರು, ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸೇವೆ.
- 2018ರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಣೆ
- 2018ರ ವಿಧಾನಸಭಾ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಗೆಲುವು
- 2023ರ ವಿಧಾನಸಭಾ ಚುನಾವಣೆಯಲ್ಲಿ ಸತತ ನಾಲ್ಕನೆೇ ಬಾರಿಗೆ ಗೆಲುವು
- (ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ವಿರುದ್ದ 27,707 ಮತಗಳ ಅಂತರದಿಂದ ಗೆಲುವು)
- ಪ್ರಸ್ತುತ ಅರಣ್ಯ, ಜೈವಿಕ ಪರಿಸರ ಮತ್ತು ಬೀದರರ್ ಜಿಲ್ಲೆ ಉಸ್ತುವಾರಿ ಸಚಿವರು ಆಗಿದ್ದಾರೆ
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.