Sunday, October 1, 2023
spot_img
- Advertisement -spot_img

Photos: ʼರಕ್ಷಾಬಂಧನʼದ ರಾಖಿಯೊಂದಿಗೆ ರಾರಾಜಿಸಿದ ರಾಜಕಾರಣಿಗಳು

ಬೆಂಗಳೂರು: ಸೋದರತ್ವ ಹಾಗೂ ಬಾಂಧವ್ಯದ ಹಬ್ಬವಾದ ರಕ್ಷಾಬಂಧನವನ್ನು ಇಂದು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ರಾಜ್ಯದ ಪ್ರಮುಖ ರಾಜಕಾರಣಿಗಳು ರಾಜಕೀಯದ ನಡುವೆಯೂ ರಕ್ಷಾಬಂಧನದಲ್ಲಿ ಪಾಲ್ಗೊಂಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಇಂದು ಗೃಹಲಕ್ಷ್ಮಿ ಯೋಜನೆಯ ಅದ್ಧೂರಿ ಚಾಲನೆ ಕಾರ್ಯಕ್ರಮದ ನಡುವೆ ತಮ್ಮ ಸಹೋದರನಾದ ವಿಧಾನ ಪರಿಷತ್ ಸದಸ್ಯ ಚನ್ನರಾಜ್‌ ಹಟ್ಟಿಹೊಳಿ ಅವರಿಗೆ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಆಚರಿಸಿದರು.

ಜೊತೆಗೆ ಹಿರಿಯ ಅಧಿಕಾರಿಗಳಿಗೆ ಮತ್ತು ತಮ್ಮ ಸಿಬ್ಬಂದಿ ವರ್ಗದವರಿಗೆ ರಾಖಿ ಕಟ್ಟುವ ಮೂಲಕ ಸಾಂಕೇತಿಕವಾಗಿ ರಕ್ಷಾ ಬಂಧನ ಆಚರಿಸಿದರು.

ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಕೂಡ ಇಂದು ವಿಜಯಪುರದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲು ಶ್ರೀ ಕಂದಗಲ್ ಹನುಮಂತರಾಯ ರಂಗಮಂದಿರಕ್ಕೆ ಆಗಮಿಸಿದಾಗ ಸಹೋದರ ವಿಶ್ವಾಸದಿಂದ ಯುವತಿಯರು ರಾಖಿ ಕಟ್ಟಿದರು.

ಕಲಬುರಗಿ ಸಂಸದ ಉಮೇಶ್ ಜಾಧವ್ ಅವರಿಗೂ ಮಹಿಳೆಯರು ರಾಖಿ ಕಟ್ಟಿ ರಕ್ಷಾಬಂಧನದ ಶುಭ ಕೋರಿದರು.

ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಸಚಿವ ಜಗದೀಶ್‌ ಶೆಟ್ಟರ್‌ ಅವರಿಗೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಹೋದರಿಯರು ರಕ್ಷಾಬಂಧನದ ಪ್ರಯುಕ್ತ ಗೃಹ ಕಚೇರಿಗೆ ಭೇಟಿ ನೀಡಿ, ರಾಖಿ ಕಟ್ಟಿ ಶುಭ ಹಾರೈಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles