ಪಾಟ್ನಾ: ಇಸ್ಲಾಂ ಧರ್ಮದ ಸಂಸ್ಥಾಪಕ ಪ್ರವಾದಿ ಮುಹಮ್ಮದ್ ‘ಮರ್ಯಾದಾ ಪುರುಷೋತ್ತಮ’ ಎಂದು ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ಹೇಳಿಕೆ ನೀಡಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ.
‘ಜಗತ್ತಿನಲ್ಲಿ ಪೈಶಾಚಿಕತೆ ಹೆಚ್ಚಾದಾಗ, ನಂಬಿಕೆ ಕೊನೆಗೊಂಡಾಗ, ಅಪ್ರಾಮಾಣಿಕರು, ಅಗೋಚರ ಶಕ್ತಿಗಳು ಎಲ್ಲೆಲ್ಲೂ ಕಾಣಿಸಿಕೊಂಡಾಗ, ಮಧ್ಯ ಏಷ್ಯಾದಲ್ಲಿ ದೇವರು ಮಹಾನ್ ಪುರುಷೋತ್ತಮ ಪ್ರವಾದಿ ಮುಹಮ್ಮದ್ ಅವರನ್ನು ಸೃಷ್ಟಿಸಿದನು. ಇಸ್ಲಾಂ ದುಷ್ಟರ ವಿರುದ್ಧ, ಅಪ್ರಾಣಿಕರ ವಿರುದ್ಧ ಧರ್ಮ ಭಕ್ತರಿಗಾಗಿ ಹುಟ್ಟಿಕೊಂಡಿತು’ ಎಂದಿದ್ದಾರೆ.
ಇದನ್ನೂ ಓದಿ: ಸನಾತನ ಧರ್ಮ ಬಗ್ಗೆ ಉತ್ತರ ಮೋಹನ್ ಭಾಗವತ್ ಕೇಳಿ: ಪಿಎಂ ಮೋದಿಗೆ ಡಿಎಂಕೆ ಪ್ರತ್ಯುತ್ತರ
ಹಿಂದೂ ಪುರಾಣಗಳಲ್ಲಿ ಭಗವಾನ್ ಶ್ರೀ ರಾಮನನ್ನು ‘ಮರ್ಯಾದಾ ಪುರುಷೋತ್ತಮ’ ಎಂದು ಸಂಬೋಧಿಸಲಾಗಿದೆ. ಆದರೆ ಚಂದ್ರಶೇಖರ್ ಅವರು ಪ್ರವಾದಿ ಮುಹಮ್ಮದ್ ಅವರನ್ನು ‘ಮರ್ಯಾದಾ ಪುರುಷೋತ್ತಮ್’ಗೆ ಹೋಲಿಸಿದ ಬೆನ್ನಲ್ಲೇ, ಭಾರೀ ಆಕ್ರೋಶಗಳು ಕೇಳಿಬಂದಿವೆ.
ಆರ್‌ಜೆಡಿ ಧರ್ಮ ಧರ್ಮಗಳ ನಡುವೆ ಮತ್ತು ಜಾತಿಯ ಹೆಸರಲ್ಲಿ ಪ್ರಚೋಧನೆ ಉಂಟುಮಾಡಿ ಮತ ಗಳಿಸಲು ನಿಂತಿದೆ ಎಂದು ಬಿಜೆಪಿ ಆರೋಪಿಸಿದೆ.
ಇದನ್ನೂ ಓದಿ: G20 Budget : ಜಿ20 ಶೃಂಗಸಭೆಯ ಖರ್ಚು ಎಷ್ಟು ಸಾವಿರ ಕೋಟಿ ಗೊತ್ತಾ?
‘ಶಿಕ್ಷಣ ಸಚಿವ ಚಂದ್ರಶೇಖರ್ ಮಾನಸಿಕ ಅಸ್ವಸ್ಥರಾಗಿದ್ದಾರೆ. ಕೆಲವೊಮ್ಮೆ, ಅವರು ರಾಮಾಯಣದ ಬಗ್ಗೆ ಪ್ರತಿಕ್ರಿಯಿಸುತ್ತಾರೆ ಮತ್ತು ನಂತರ ಅವರು ಪ್ರವಾದಿ ಮುಹಮ್ಮದ್ ಬಗ್ಗೆ ಮಾತನಾಡುತ್ತಾರೆ. ಇವರು ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಮತ ರಾಜಕಾರಣ ಮಾಡುತ್ತಾರೆ’ ಎಂದು ಬಿಜೆಪಿ ವಕ್ತಾರ ಅರವಿಂದ್ ಕುಮಾರ್ ಸಿಂಗ್ ಹೇಳಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.