ಬೆಂಗಳೂರು : ಅನ್ನಭಾಗ್ಯ ಯೋಜನೆ ಸಂಪೂರ್ಣ ಅನುಷ್ಠಾನಕ್ಕೆ ಒತ್ತಾಯಿಸಿ ಆಹಾರ ಇಲಾಖೆ ಕಚೇರಿ ಮುಂದೆ ದಿಢೀರ್ ಪ್ರತಿಭಟನೆ ನಡೆಸಲಾಗಿದೆ.
‘ಅನ್ನ ಭಾಗ್ಯ’ ಯೋಜನೆ ಸಂಪೂರ್ಣವಾಗಿ ರಾಜ್ಯದಲ್ಲಿ ಜಾರಿಯಾಗದ ಹಿನ್ನಲೆಯಲ್ಲಿ, ನಗರದ ಆಹಾರ ಇಲಾಖೆ ಕಚೇರಿಯ ಮುಂದೆ ಧಿಡೀರ್ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಸರಕಾರಿ ಪಡಿತರ ವಿತರಕರ ಸಂಘದ ರಾಜ್ಯಾದ್ಯಕ್ಷರಾದ ಟಿ ಕೃಷ್ಣಪ್ಪ ಅವರ ನೇತೃತ್ವದಲ್ಲಿ, ಕಚೇರಿ ಮುಂದೆ ಧರಣಿ ಕುಳಿತು ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅನ್ನಭಾಗ್ಯ ಸ್ಕೀಂ ಅನುಷ್ಟಾನಕ್ಕೆ ಲಂಚ ಕೇಳಿದ ಅಧಿಕಾರಿಯನ್ನು ಬಂಧಿಸುವಂತೆ ಒತ್ತಾಯ ಮಾಡಲಾಯಿತು.
ಇದನ್ನೂ ಓದಿ : ತಮಿಳುನಾಡಿಗೆ ʼಕಾವೇರಿʼ; ಟೈರ್ ಸುಟ್ಟು ರೈತರ ಆಕ್ರೋಶ
ಬೇಡಿಕೆಗಳೇನು?
- ಅನ್ನಭಾಗ್ಯ ಯೋಜನೆ ಸಂಪೂರ್ಣವಾಗಿ ಜಾರಿಯಾಗುವಂತೆ ಒತ್ತಾಯ
- 10 ಕೆಜಿ ಅಕ್ಕಿ ವಿತರಕರ ಮೂಲಕವೇ ವಿತರಣೆ ಆಗಬೇಕು.
- 2018ರಿಂದ ಬರಬೇಕಿರುವ ಇಕೆವೈಸಿ ಸೇವಾ ಶುಲ್ಕ 100 ಕೋಟಿ ಹಣ ಇದುವರೆಗೆ ಸರ್ಕಾರ ನೀಡಿಲ್ಲ ಅದನ್ನು ಕೂಡಲೇ ನೀಡಬೇಕು.
- 2022ರಿಂದ ಕ್ವಿಂಟಾಲ್ ಅಕ್ಕಿಗೆ ಹೆಚ್ಚುವರಿ 24 ಪೈಸೆ ಅರಿಯರ್ಸ್ 105 ಕೋಟಿ ಬಾಕಿ ಬರಬೇಕಿದೆ.10 ಕೆಜಿಗೆ ಕಮಿಷಿನ್ ಕೊಡಬೇಕು.
- ಕೇವಲ ಐದು ಕೆಜಿ ಕೊಟ್ಟರೆ ಸಾಲದು, ಅಕ್ಕಿ ಪ್ರಮಾಣವನ್ನು ಎರಿಸಬೇಕು.
- ಸಂಘದ ಅಧ್ಯಕ್ಷರ ಮೇಲೆ ಕೇಸ್ ಹಾಕಲಾಗಿದೆ. ಆ ಕೇಸ್ ಅನ್ನು ಕೂಡಲೇ ವಾಪಸ್ ಪಡೆದುಕೊಳ್ಳಬೇಕು
- ಅನ್ನಭಾಗ್ಯ ಸ್ಕೀಂ ಅನುಷ್ಠಾನಕ್ಕೆ ಲಂಚ ಕೇಳಿದ ಅಧಿಕಾರಿಯನ್ನು ಬಂಧಿಸುವಂತೆ ಒತ್ತಾಯ ಮಾಡಲಾಯಿತು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.