ಹಾಸನ : ಜಿಲ್ಲೆಯಲ್ಲಿ ಪಿಯುಸಿ ಕಾಲೇಜು ಪ್ರವೇಶಾತಿ ಪ್ರಾರಂಭಿಸಿ, ಇಲ್ಲ ಎಂದರೆ ಮಕ್ಕಳೆಲ್ಲ ಎಣ್ಣೆ ಅಂಗಡಿಗೆ ಹೋಗುತ್ತಾರೆ. ಫಲಿತಾಂಶ ಬಂದು ಎಷ್ಟು ದಿನವಾಗಿದೆ, ಯಾಕೆ ಕಾಲೇಜಿನ ಅಡ್ಮಿಷನ್ ಆರಂಭಿಸಿಲ್ಲ ಎಂದು ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಗುಡುಗಿದರು.
ನಗರದ ಸಂಸದರ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರ ರಹಿತ ಸರ್ಕಾರ, ಅವರ ಸರ್ಕಾರ ಪ್ರಾಮಾಣಿಕವಾಗಿದೆ ಹಾಗೂ ಜನಪರವಾಗಿದೆ. ನಾನು ವೈಯಕ್ತಿತವಾಗಿ ಯಾರ ಟೀಕೆಯನ್ನು ಮಾಡುವುದಿಲ್ಲ ಎಂದರು.
ಬಡವರ ಮಕ್ಕಳು ಓದಲು ಕಾಲೇಜು ಓಪನ್ ಮಾಡಿ, ಇಂದಿನ ನಮ್ಮ ಮಕ್ಕಳ ಭವಿಷ್ಯದ ಜೊತೆ ಆಟವಾಡಬೇಡಿ. ಇಲಾಖೆಗೆ ಒಳ್ಳೆಯ ಮಂತ್ರಿಗಳಿದ್ದಾರೆ. ಅವರು ಇದರ ಬಗ್ಗೆ ಗಮನ ಹರಿಸಬೇಕೆಂದು ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಹೇಳಿದರು.
ಮೊದಲಿಗೆ 10 ಕೆಜಿ ಅಕ್ಕಿ ಕೊಡುತ್ತೀವಿ ಅಂದಿದ್ದರು. ಆದರೆ ಈಗ 3 ಕೆ.ಜಿ ಕೊಡುತ್ತಿದ್ದಾರೆ. ಅವರ ಐದು ಗ್ಯಾರಂಟಿ ಕೊಡುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ಮೊದಲು ಶಾಲೆಗಳಿಗೆ ಮೂಲಭೂತ ಸೌಕರ್ಯ ಹಾಗೂ ಜನರಿಗೆ ಒಳ್ಳೆಯ ಗುಣಮಟ್ಟದ ರಾಗಿಯನ್ನು ವಿತರಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಇದನ್ನೂ ಓದಿ : ‘ಗುತ್ತಿಗೆದಾರರಿಂದ ನಾವು ನಗೆಪಾಟಲಿಗೆ ಗುರಿಯಾಗಿದ್ದೇವೆ’ : ಕುಮಾರಸ್ವಾಮಿ ಹೀಗಂದಿದ್ಯಾಕೆ?
ನರೇಗಾ ಕಾರ್ಮಿಕರು ಸುಮಾರು 6 ತಿಂಗಳಿನಿಂದ ಪ್ರತಿನಿತ್ಯ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಬರಬೇಕಾದ 120 ಕೋಟಿ ರೂ. ಹಣವನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ. ಅರಣ್ಯ, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆಗಳಿಗೂ ಹಣ ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರದವರು ಯಾಕೆ ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಕಾವೇರಿ ನೀರು ಹಂಚಿಕೆ ಬಗ್ಗೆ ಮಾತನಾಡಿದ ರೇವಣ್ಣ, ನಮ್ಮಲ್ಲಿ 32 ಟಿಎಂಸಿ ನೀರಿದೆ. ಇವತ್ತು 11 ಟಿಎಂಸಿ ಬಿಟ್ಟಿದ್ದಾರೆ. 11.5 (ಹನ್ನೊಂದುವರೆ) ಟಿಎಂಸಿ ನೀರು ಎಲ್ಲಿಗೆ ಕೊಟ್ರಿ..? ರೈತರಿಗೆ ಎಷ್ಟು ಕೊಟ್ರೀ ತಮಿಳುನಾಡಿಗೆ ಎಷ್ಟು ಬಿಟ್ರಿ? ಎಂದು ಅಬ್ಬರಿಸಿದರು.
ಬರಗಾಲ ಯಾವಾಗ ಘೋಷಣೆ ಮಾಡುತ್ತಾರೆ. ಇವತ್ತು ಕಂಪ್ಲೀಟ್ ಮೆಕ್ಕೆಜೋಳ ಒಣಗಿದೆ, ನಮ್ಮ 7 ವಿಧಾನಸಭಾ ಕ್ಷೇತ್ರಗಳನ್ನು ಬರಗಾಲ ಪೀಡಿತ ಪ್ರದೇಶಗಳಾಗಿ ಘೋಷಣೆ ಮಾಡಬೇಕು ಎಂದು ತಾಕೀತು ಮಾಡಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.