Sunday, March 26, 2023
spot_img
- Advertisement -spot_img

ಪುನೀತ್ ಜನ್ಮದಿನಕ್ಕೆ ಶುಭ ಕೋರಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ಬೆಂಗಳೂರು: ಇಂದು ಮಾರ್ಚ್ 17 ಪುನೀತ್ ರಾಜ್​ಕುಮಾರ್ ಜನ್ಮದಿನವಾಗಿದ್ದು, ಪುನೀತ್ ಹುಟ್ಟುಹಬ್ಬಕ್ಕೆ ರಾಜಕಾರಣಿಗಳು, ಸಿನೆಮಾಗಣ್ಯರು ಸೇರಿ ಹಲವರು ವಿಶ್ ಮಾಡಿದ್ದಾರೆ. ಅದೇ ರೀತಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಕೂಡಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಪ್ರೀತಿಯಿಂದ ವಿಶ್ ಮಾಡಿ ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿರುವ ಪುನೀತ್ ಸಮಾಧಿಗೆ ರಾಘವೇಂದ್ರ ರಾಜ್ ಕುಮಾರ್ ಕುಟುಂಬಸ್ಥರು, ಪುನೀತ್ ಪುತ್ರಿ ವಂದಿತಾ ತೆರಳಿ ಇಷ್ಟದ ತಿನಿಸುಗಳು, ಕೇಕ್ ಇಟ್ಟು ಕತ್ತರಿಸಿ, ಪೂಜೆ ಸಲ್ಲಿಸಿ ದ್ದಾರೆ. ಈ ವೇಳೆ ಪುನೀತ್ ಅಭಿಮಾನಿಗಳು ಸಹ ಹಾಜರಿದ್ದರು. ಇಂದು ಬೆಳಗ್ಗೆ ಅಶ್ವಿನಿ ಪುನೀತ್ ರಾಜ್ ಕುಮಾರ್, ನಟ ಶಿವರಾಜ್ ಕುಮಾರ್ ಕುಟುಂಬ ಸೇರಿದಂತೆ ಇತರರು ಸಮಾಧಿ ಬಳಿ ಬಂದು ಪೂಜೆ ಸಲ್ಲಿಸಿದ್ದಾರೆ. ಕಂಠೀರವ ಸ್ಡುಡಿಯೊದಲ್ಲಿ ಪುನೀತ್ ಸಮಾಧಿಗೆ ಬರುವವರ ಸಂಖ್ಯೆ ಇನ್ನು ಹೆಚ್ಚಾಗಲಿರುವುದರಿಂದ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.

Related Articles

- Advertisement -

Latest Articles