ಮೈಸೂರು: ಚುನಾವಣಾ ಪ್ರಚಾರದ ವೇಳೆ ದರ್ಶನ್ ಪುಟ್ಟಣ್ಣಯ್ಯರಿಗೆ ಅಭಿಮಾನಿಯೊಬ್ಬರು ಬೃಹತ್ ನವಿಲುಗರಿಯ ಹಾರ ಹಾಕಿ ಸನ್ಮಾನಿಸಿದ್ದಾರೆ.
ಇದೀಗ ದರ್ಶನ್ ಹಾಗೂ ಅವರ ಅಭಿಮಾನಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.ನವಿಲುಗರಿಗಳ ಹಾರ ಹಾಕಿಕೊಂಡಿದ್ದ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ರೈತ ಸಂಘದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಕ್ಷೇತ್ರದಾದ್ಯಂತ ಪಾದಯಾತ್ರೆ ಮಾಡುತ್ತಿದ್ದು, ಈ ವೇಳೆ ಹಾಕಿದ್ದ ಹಾರವೇ ಇದೀಗ ಪುಟ್ಟಣ್ಣಯ್ಯರಿಗೆ ಸಂಕಷ್ಟ ತಂದಿದೆ.
ದರ್ಶನ್ ನವಿಲುಗರಿಗಳ ಹಾರ ಧರಿಸಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವನ್ಯಜೀವಿ ಕಾರ್ಯಕರ್ತರು, ಪುಟ್ಟಣ್ಣಯ್ಯ ಹಾಗೂ ಅವರ ಬೆಂಬಲಿಕರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಸಂಬಂಧ ಅರಣ್ಯ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಈ ಬಾರಿಯ ವಿಧಾನಸಭೆ ಚುನಾವಣೆಗೆ 5 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಲಾಗಿದ್ದು, ದರ್ಶನ್ ಪುಟ್ಟಣ್ಣಯ್ಯ ಕೂಡ ಚುನಾವಣಾ ಕಣದಲ್ಲಿದ್ದಾರೆ.