Monday, March 20, 2023
spot_img
- Advertisement -spot_img

ಬಾರ್, ಪಬ್‌ಗಳಲ್ಲಿ ಕುಳಿತು ಡ್ರಿಂಕ್ಸ್ ಮಾಡಲು ಸ್ಪೆಷಲ್ ಮಾಸ್ಕ್ ರಿಲೀಸ್ ಮಾಡಿದ್ದಾರೆ : ಸಚಿವ ಆರ್‌ ಅಶೋಕ್

ಬೆಳಗಾವಿ: ಬಾರ್, ಪಬ್‌ಗಳಲ್ಲಿ ಕುಳಿತು ಡ್ರಿಂಕ್ಸ್ ಮಾಡಲು ಸ್ಪೆಷಲ್ ಮಾಸ್ಕ್ ರಿಲೀಸ್ ಮಾಡಿದ್ದಾರೆ. ಆ ಮಾಸ್ಕ್‌ಗಳನ್ನು ಪಡೆದು ಪಬ್, ಬಾರ್‌ನವರು ಗ್ರಾಹಕರಿಗೆ ನೀಡಲಿ ಎಂದು ಸಚಿವ ಆರ್ ಅಶೋಕ್‌ ಹೇಳಿದರು.

ಬೆಳಗಾವಿ ನಗರದಲ್ಲಿ ಖಾಸಗಿ ಹೋಟೆಲ್‌ನಲ್ಲಿ ಕೊರೋನಾದ ಹೊಸ ನಿಯಮಗಳ ಜಾರಿಗೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ , ನಿಮಗ್ಯಾರಿಗೋ ಬಾರ್ ವ್ಯಾಪಾರ ಆಗಬೇಕು ಎಂದು ಜನರ ಪ್ರಾಣ ತೆಗೆಯೋದು ಒಳ್ಳೆಯದಲ್ಲ ಎಂದು ಬೆಳಗಾವಿಯಲ್ಲಿ ಬಾರ್ ಮಾಲೀಕರ ವಿರುದ್ಧ ಆರ್ ಅಶೋಕ್ ಗರಂ ಆಗಿ ಪ್ರತಿಕ್ರಿಯೆ ನೀಡಿದರು.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ರಚನೆ ಮಾಡಲಾಗುವುದು. ಸಾರ್ವಜನಿಕರು ಭಯ ಪಡೋದು ಬೇಡ ಸರಕಾರ ಕರ್ನಾಟಕದ‌ ಜನತೆಯೊಂದಿಗಿದೆ. ಜನತೆಯೂ ಸರ್ಕಾರದೊಂದಿಗೆ ಸಹಕರಿಸಿಬೇಕೆಂದು ಕೇಳಿಕೊಂಡರು.ಮಾಸ್ಕ್ ಹಾಕಿಕೊಂಡೇ ಡ್ರಿಂಕ್ಸ್ ಮಾಡಬಹುದು. ಆ ರೀತಿ ಮಾಸ್ಕ್‌ ರಿಲೀಸ್ ಮಾಡಿದ್ದಾರೆ, ಇವತ್ತು ಪತ್ರಿಕೆಯಲ್ಲಿ ನೋಡಿದ್ದೇನೆ. ಜನರ ಪ್ರಾಣ ಉಳಿದರೆ ಎಲ್ಲ ಸಿಗುತ್ತೆ, ಜನರ ಪ್ರಾಣಕ್ಕೆ ಕಂಟಕ ಬಿದ್ದರೆ ಏನು ಸಿಗುತ್ತೆ,

ನಿನ್ನೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ. ಆಸ್ಪತ್ರೆಯಲ್ಲಿರೋ ಎಲ್ಲ ಸೌಲಭ್ಯಗಳ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಇವತ್ತು ಸಹ ರಾಜ್ಯದ ಎಲ್ಲ ಕಡೆಗಳಲ್ಲಿರೋ ಆಸ್ಪತ್ರೆಗಳ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದ ಯಾವ ಮೂಲೆಯಲ್ಲಿಯೂ ತೊಂದರೆ ಆಗಲು ನಮ್ಮ ಸರ್ಕಾರ ಬಿಡಲ್ಲ. ಆಂಬ್ಯುಲೆನ್ಸ್, ಮೆಡಿಸಿನ್, ಐಸಿಯು ಕೊರತೆಯುಂಟಾಗದಂತೆ ಮಾಡುತ್ತೇವೆ ಎಂದರು.

Related Articles

- Advertisement -

Latest Articles