ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸೈಲೆಂಟ್ ಆಗಿದ್ದರೆ, ಡಿಸಿಎಂ ವೈಲೆಂಟ್ ಆಗಿದ್ದಾರೆ ಎಂದು ಮಾಜಿ ಸಚಿವ ಆರ್. ಅಶೋಕ್ ಟೀಕಾಪ್ರಹಾರ ನಡೆಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯರಿಗಿಂತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೆಚ್ಚು ಮಾತನಾಡುತ್ತಿದ್ದಾರೆ ಎಂದರು. ಕಾಂಗ್ರೆಸ್ ಸರ್ಕಾರ ಡಬಲ್ ಸ್ಟೇರಿಂಗ್ ಸರ್ಕಾರ. ಉಪಮುಖ್ಯಮಂತ್ರಿ ಸ್ಥಾನ ಸಂವಿಧಾನಿಕ ಹುದ್ದೆ ಅಲ್ಲ. ಆದರೆ, ಡಿಸಿಎಂ ಶಿವಕುಮಾರ್ ಅಧಿಕಾರಿಗಳ ಸಭೆಯಲ್ಲಿ ಧಮ್ಕಿ ಹಾಕುತ್ತಾರೆ. ಸಿಎಂ ಮಾತನಾಡುವ ಬದಲು ಡಿಸಿಎಂ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಗ್ಯಾರೆಂಟಿ ಯೋಜನೆಗಳಿಗೆ ಕಂಡಿಷನ್ ಹಾಕುತ್ತಿದ್ದಾರೆ. ಇದು ಮೋಸ. ಯಾರೂ ಕರೆಂಟ್ ಬಿಲ್ ಕಟ್ಟಬೇಡಿ. ಮಹಿಳೆಯರು ಯಾರೂ ಬಸ್ನಲ್ಲಿ ಟಿಕೆಟ್ ತಗೊಬೇಡಿ ಎಂದು ಕರೆ ನೀಡಿದರು.ಸರ್ಕಾರ ಬಂದು 24 ಗಂಟೆ ಒಳಗೆ ಗ್ಯಾರಂಟಿ ಜಾರಿ ಅಂತ ಹೇಳಿದ್ದರು. ಆದರೆ, 240 ಗಂಟೆ ಕಳೆದರೂ ಗ್ಯಾರೆಂಟಿ ಯೋಜನೆ ಜಾರಿ ಆಗಿಲ್ಲ ಎಂದು ಟೀಕಿಸಿದರು.
ಆರ್ ಎಸ್ ಎಸ್ ಬ್ಯಾನ್ ವಿಚಾರವಾಗಿ ಮಾತನಾಡಿ, ಆರ್ಎಸ್ಎಸ್ ಬ್ಯಾನ್ ಮಾಡಿದರೆ ಸರ್ಕಾರ ಮೂರು ತಿಂಗಳು ಇರಲ್ಲ, ಬ್ಯಾನ್ ಮಾಡಲು ನಿಮ್ಮ ಅಪ್ಪ, ತಾತಾ , ಅಜ್ಜಿ ಕೈಯಲ್ಲೇ ಆಗಲಿಲ್ಲ. ಈಗ ಆಗುತ್ತಾ? ಕಾಂಗ್ರೆಸ್ ಡಬಲ್ ಸ್ಟೇರಿಂಗ್ ಸರ್ಕಾರವಾಗಿದೆ. ಈ ಸರ್ಕಾರ ಬಹಳ ದಿನ ಉಳಿಯಲ್ಲ ಎಂದು ಆಕ್ರೋಶಿಸಿದರು.