ಬೆಂಗಳೂರು: ಜೆಡಿಎಸ್ ಜೊತೆಗೆ ಹೊಂದಾಣಿಕೆಯ ಪ್ರಮೇಯ ಬರೋದೇ ಇಲ್ಲಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ನಾವು ಯಾರ ಜತೆಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ರಿಸಲ್ಟ್ ಬರಲಿ, ರಿಸಲ್ಟ್ ಬಂದ ಮೇಲೆ ಹೈಕಮಾಂಡ್ ನಾಯಕರ ಸೂಚನೆಯಂತೆ ನಡೆದುಕೊಳ್ತೇವೆ ಎಂದರು. ನಾವು ಮ್ಯಾಚ್ ಆಡೋದಕ್ಕೆ ಬಂದಿದ್ದೇವೆ, ಆಡಿ ಗೆಲ್ತೀವಿ ಎಂದರು.
ಕಳೆದ 4 ವರ್ಷದಿಂದ ಸ್ಥಿರ ಸರ್ಕಾರ ಕೊಟ್ಟಿದ್ದು ಬಿಜೆಪಿ , ಎಕ್ಸಿಟ್ ಪೋಲ್‌ಗಳೆಲ್ಲ ಸುಳ್ಳು ಅಂತ ಹೇಳಲ್ಲ, ಆದರೆ ಯಾವುದೇ ಪಕ್ಷಕ್ಕೂ ಬಹುಮತ ಸಿಕ್ಕಿಲ್ಲ, ಕೆಲವೇ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ಗೆದ್ದಿದೆ. ಅದೇ ನಿಜವಾಗೋದು ಈ ಬಾರಿ ಬಿಜೆಪಿಗೇ ಬಹುಮತ, ಬಿಜೆಪಿಯದ್ದೇ ಸರ್ಕಾರ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಿಸಲ್ಟ್ ಬಂದ ಮೇಲೆ ತಂತ್ರಗಾರಿಕೆ ಇದ್ದೇ ಇರುತ್ತದೆ. ನಮಗೆ ವಿಶ್ವಾಸ ಇದೆ. ನಾವೇ ಸರ್ಕಾರ ಮಾಡುತ್ತೇವೆ. ನಮ್ಮ ಕಾರ್ಯಕರ್ತರು, ಜನರ ಮೇಲೆ ನಂಬಿಕೆ ಇದೆ ಎಂದರು.ರಾಜ್ಯಕ್ಕೆ ಯಾರು ಸೂಕ್ತ ಅವರೇ ಸಿಎಂ ಆಗುತ್ತಾರೆ. ಬೊಮ್ಮಾಯಿ ಅವರೇ ಮುಂದುವರಿಯಬಹುದು ಅಥವಾ ಮುಂದುವರಿಯದಿರಲೂ ಬಹುದು. ಹೈಕಮಾಂಡ್ ನಾಯಕರು ಇದರ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.