ಚಿಕ್ಕಬಳ್ಳಾಪುರ: ಕಾಂಗ್ರೆಸ್ ಅವರು ಎಲ್ಲೆಲ್ಲಿ ಹೋಗುತ್ತಿದ್ದಾರೆ ಆ ಸ್ಥಳಗಳನ್ನು ಗಂಜಲ ಹಾಕಿ ತೊಳೆದಾಗ ಮಾತ್ರ ಪಾಪ ಹೋಗುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಚಿಕ್ಕಬಳ್ಳಾಪುರ ಉತ್ಸವದಲ್ಲಿ ಮಾತನಾಡಿ,ಕಾಂಗ್ರೆಸ್ ಸರಿ ಇಲ್ಲ, ಅವರು ನೀರು ಹಾಕಿ ತೊಳೆದರೆ ಸಾಲದು, ಗಂಜಲ ಹಾಕಿ ತೊಳೆದಾಗ ಮಾತ್ರ ಪಾಪ ಹೋಗೋದು ಎಂದು ವಾಗ್ದಾಳಿ ಮಾಡಿದರು.ಈ ಹಿಂದೆ ಕಾಂಗ್ರೆಸ್ನ 5 ವರ್ಷ ಸರ್ಕಾರ ಇದ್ದಾಗ ಕಾಂಗ್ರೆಸ್ನವರು ಜನರಿಗೆ ಮೋಸ ಮಾಡಿದ್ದರು.
ಕಾಂಗ್ರೆಸ್ ನಾಲಾಯಕ್ ಪಕ್ಷ ಎಂದು 16 ಜನ ಹೊರ ಬಂದರು. ಹೀಗಿದ್ದರೂ, ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಮಾತಿನಂತೆ ಕಾಂಗ್ರೆಸ್ನವರು ಹೊರಟಿದ್ದಾರೆ. ಆದಷ್ಟು ಬೇಗ ಅವರಿಗೆ ಭ್ರಮನಿರಸನವಾಗಲಿದೆ. ಈ ಹಿಂದೆ ರಾಜ್ಯವನ್ನು ಲೂಟಿ ಮಾಡಿದವರು ಈಗ ಬಸ್ನಲ್ಲಿ ಬರುತ್ತಿದ್ದಾರೆ ಎಚ್ಚರವಾಗಿರಿ ಎಂದು ಹೇಳಿದರು.
ಕಾಂಗ್ರೆಸ್ ದರೋಡೆಕೋರರ ಕೂಟ, ಸಿದ್ದರಾಮಯ್ಯ ಸಂಪುಟ ಇದ್ದಾಗ ಏನಾದರೂ ಒಳ್ಳೆಯದು ಆಗಿದೆಯಾ? ಅವರು ಧರ್ಮಾತ್ಮರಾಗಿದ್ದರೆ, ಸತ್ಯ ಹರಿಶ್ಚಂದ್ರರ ಮೊಮ್ಮಕ್ಕಳಾಗಿದ್ದರೆ ಅವರ ಪಕ್ಷ ಬಿಟ್ಟು 16 ಜನ ಯಾಕೆ ಓಡಿಹೋದರು ಎಂದು ಪ್ರಶ್ನಿಸಿದರು.