ಉಡುಪಿ: ಪ್ರಧಾನಿ ನರೇಂದ್ರ ಮೋದಿ ಪಕ್ಷದ ಹಿರಿಯ ಮುಖಂಡರ ಬಗ್ಗೆ ಗೌರವವಿದೆ. 15 ವರ್ಷ ಶಾಸಕನಾಗಿದ್ದು ನಾನು ಈಗ ಬೇಡವಾದ್ನಾ? ಎಂದು ಶಾಸಕ ರಘುಪತಿ ಭಟ್ ಬೇಸರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಬಿಜೆಪಿ ಎಲ್ಲವನ್ನೂ ಕೊಟ್ಟಿದೆ. ನಾನೂ ಪಕ್ಷಕ್ಕೆ ಜೀವನ ಮುಡಿಪಾಗಿಟ್ಟಿದ್ದೇನೆ. ನಾನು ಸಾಯುವಾಗ ಬಿಜೆಪಿಯ ಬಾವುಟ ನನ್ನ ಮೇಲೆ ಬೀಳಬೇಕು. ಸಂಕಷ್ಟದ ಕಾಲದಲ್ಲಿ ನಾನು ಬೇಕಾಗಿತ್ತು ಈಗ ನಾನು ಬೇಡವಾದೆ ಎಂದರು.
ನಾನು ಟಿವಿ ನೋಡಿ ವಿಚಾರ ತಿಳ್ಕೊಂಡೆ, ಒಂದು ಫೋನ್ ಮಾಡಿ ನನಗೆ ಟಿಕೆಟ್ ಇಲ್ಲ ಅಂತಾ ಹೇಳಿಲ್ಲ, ಮೊದಲೇ ಹೇಳಿದ್ದಿದ್ರೆ ಈಶ್ವರಪ್ಪ ರೀತಿಯಲ್ಲಿ ರಾಜೀನಾಮೆ ನೀಡುತ್ತಿದ್ದೆ ಎಂದು ತಿಳಿಸಿದರು. ನಾನು ಜಾತಿಯಲ್ಲಿ ಬ್ರಾಹ್ಮಣ. ಶಾಸಕನಾಗಿ ಎಂದು ಬ್ರಾಹ್ಮಣನಾಗಿ ನಡೆದುಕೊಂಡಿಲ್ಲ. ನಾನು ಕೆಲಸ ಮಾಡಿದ ಶಾಸಕ ಎಂಬ ಧೈರ್ಯದಲ್ಲಿ ಇದ್ದೆ. ನಾನು ಶಾಸಕನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನನ್ನನ್ನು ನಡೆಸಿಕೊಂಡ ರೀತಿಗೆ ಬಹಳ ಬೇಸರಗೊಂಡಿದ್ದೇನೆ ಎಂದು ಅಸಾಮಾಧಾನ ಹೊರಹಾಕಿದರು.
ಜನಾರ್ದನ ರೆಡ್ಡಿಯ ಪಕ್ಷಕ್ಕೆ ನಾನು ದೇವರಾಣೆಗೂ ಹೋಗುವುದಿಲ್ಲ. ನಾನು ಪಕ್ಷೇತರ ನಿಲ್ಲುತ್ತೇನೆ, ನಿಲ್ಲುವುದಿಲ್ಲ ಎಂದು ಹೇಳಲು ನಾನಿನ್ನು ನಿರ್ಧಾರವೇ ಮಾಡಿಲ್ಲ ಎಂದು ಹೇಳಿದರು.