Thursday, June 8, 2023
spot_img
- Advertisement -spot_img

ಕಾಂಗ್ರೆಸ್‌ ಪಕ್ಷವೇ ಈ ದೇಶದ ಶಕ್ತಿ: ಡಿಕೆಶಿವಕುಮಾರ್

ಬೆಳಗಾವಿ: ಕಾಂಗ್ರೆಸ್‌ ಶಕ್ತಿಯೇ ಈ ದೇಶದ ಶಕ್ತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಹೇಳಿದರು. ಬೆಳಗಾವಿಯಲ್ಲಿ ನಡೆಯುತ್ತಿರುವ ಯುವ ಕ್ರಾಂತಿ ಸಮಾವೇಶದಲ್ಲಿ ಮಾತನಾಡಿ, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಬೆಳಗಾವಿಯಿಂದಲೇ ಪ್ರಜಾಧ್ವನಿ ಆರಂಭಿಸಿದ್ವಿ , ಯುವಕರಿಗೆ ಶಕ್ತಿ ಕೊಡಲು ರಾಹುಲ್ ಗಾಂಧಿ ಬಂದಿದ್ದಾರೆ, ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಬೇಕು ಎಂಬುದೇ ಕಾಂಗ್ರೆಸ್ ಉದ್ದೇಶ ಎಂದು ತಿಳಿಸಿದರು.

ಕರ್ನಾಟಕವನ್ನು ಭ್ರಷ್ಟ ಮುಕ್ತ ರಾಜ್ಯ ಮಾಡಲು ಪಣ ತೊಟ್ಟಿದ್ದೇವೆ, ರಾಜ್ಯದಲ್ಲಿ 140 ಸ್ಥಾನ ಗೆದ್ದು ಅಧಿಕಾರಕ್ಕೆ ಬರ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಧಿಕಾರಕ್ಕೆ ಬಂದ್ರೆ ಮಹಿಳೆಯರಿಗೆ 2 ಸಾವಿರ , ತಲಾ 10 ಕೆಜಿ ಅಕ್ಕಿ ಕೊಡುವ ಮಾತು ಕೊಟ್ಟಿದ್ದೇವೆ ಎಂದು ತಿಳಿಸಿದರು.

ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿ, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಯುವ ನಿಧಿ ಹೆಸರಿನಲ್ಲಿ ಪ್ರತಿ ತಿಂಗಳು ನಿರುದ್ಯೋಗ ಭತ್ಯೆಯಾಗಿ ಪದವೀಧರರಿಗೆ 3,000 ರೂ, ಡಿಪ್ಲೊಮಾ ಪದವೀಧರರಿಗೆ 1500 ರೂ, ನೀಡಲಾಗುವುದು ಎಂದು ಘೋಷಣೆ ಮಾಡಿದರು. ಇದು ರೈತರ, ಯುವಕರ ಭಾರತ. ದೇಶದಲ್ಲಿ ಇಂದು ದ್ವೇಷದ ಭಾವನೆ ಬಿತ್ತಲಾಗುತ್ತಿದೆ. ಕರ್ನಾಟಕ ಸರ್ಕಾರ ಯುವಕರಿಗೆ ಉದ್ಯೋಗ ನೀಡುತ್ತಿಲ್ಲ ಎಂದು ಟೀಕಿಸಿದರು.

ಇದೇ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ನಾಲ್ಕನೇ ಗ್ಯಾರಂಟಿ ಕಾರ್ಡ್ ನ್ನು ಬಿಡುಗಡೆ ಮಾಡಿ ಮಾತನಾಡಿದರು. ಖಾಲಿ ಇರುವ ಹುದ್ದೆಯನ್ನು ಬಿಜೆಪಿ ಭರ್ತಿ ಮಾಡ್ತಿಲ್ಲ, ಮುಂದಿನ ಎಲೆಕ್ಷನ್ ರಾಜ್ಯಕ್ಕೆ ಬಹಳ ಮಹತ್ವವಾಗಿದ್ದು, ನಾವು ಅಧಿಕಾರಕ್ಕೆ ಬಂದ್ರೆ ಎಲ್ಲ ಹುದ್ದೆ ಭರ್ತಿ ಮಾಡ್ತೇವೆ ಎಂದು ಆಶ್ವಾಸನೆ ನೀಡಿದರು. ಒಂದುವರೆ ವರ್ಷದಲ್ಲಿ ಒಂದು ಲಕ್ಷ ಹುದ್ದೆಭರ್ತಿ ಮಾಡ್ತೇವೆ ಎಂದರು.

ಬೆಳಗಾವಿ ಕಾಂಗ್ರೆಸ್​​ನ ಶಕ್ತಿಶಾಲಿ ಜಿಲ್ಲೆಯಾಗಿತ್ತು. ಹದಿನೆಂಟರಲ್ಲಿ ಹದಿನೈದು ಹದಿನಾರು ಸ್ಥಾನ ಗೆಲ್ಲುತ್ತಿದ್ದೆವು. ಇಂದು ಕೂಡಾ ಆ ಪರಿಸ್ಥಿತಿ ಇದೆ, ಖಂಡಿತವಾಗಿಯೂ ಹದಿನೆಂಟು ಸ್ಥಾನ ಬೆಳಗಾವಿಯಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Related Articles

- Advertisement -spot_img

Latest Articles