ಲಕ್ನೋ: ರಾಹುಲ್‌ಗೆ 53 ವರ್ಷವಾಗಿದೆ, 53 ವರ್ಷದ ವ್ಯಕ್ತಿ ಎಲ್ಲಿಯಾದರೂ ಮದುವೆಯಾಗುತ್ತಾರೆಯೇ? ಎಂದು ಕೇಂದ್ರ ಸಚಿವ ಅಜಯ್ ಮಿಶ್ರಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ರಾಹುಲ್ ಗಾಂಧಿ ಮದುವೆ ವಿಚಾರ ಪ್ರಸ್ತಾಪಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ರಾಜಕೀಯ ಮಾತುಕತೆ ನಡೆಯುವುದಿಲ್ಲ, ಬದಲಾಗಿ ರಾಹುಲ್ ಗಾಂಧಿ ಮದುವೆ ಬಗ್ಗೆ ಚರ್ಚೆ ನಡೆಯುತ್ತಿದೆ. ರಾಹುಲ್ ಗಾಂಧಿಗೆ 53 ವರ್ಷ, 53 ವರ್ಷದ ವ್ಯಕ್ತಿ ಎಲ್ಲಿಯಾದರೂ ಮದುವೆಯಾಗುತ್ತಾನೆಯೇ? 53 ವರ್ಷದ ವ್ಯಕ್ತಿ ಮದುವೆಯಾದರೆ ಜನ ಏನೆಂದು ಮಾತನಾಡಿಕೊಳ್ಳುತ್ತಾರೆ? ಎಂದು ಪ್ರಶ್ನಿಸಿದ್ದು, ಕಾಂಗ್ರೆಸ್ ಕಣ್ಣು ಕೆಂಪಾಗಿಸಿದೆ.
ಇದನ್ನೂ ಓದಿ: ದೇಶದ ಅತೀ ಶ್ರೀಮಂತ ರಾಜಕೀಯ ಪಕ್ಷ ಯಾವುದು ಗೊತ್ತಾ?
ಇಷ್ಟಕ್ಕೆ ಸುಮ್ಮನಾಗದ ಸಚಿವರು ಲಾಲು ಯಾದವ್ ವಿರುದ್ಧ ವಾಗ್ದಾಳಿ ನಡೆಸಿದರು. ಅನಾರೋಗ್ಯದ ನೆಪದಲ್ಲಿ ಲಾಲು ಜೈಲಿನಿಂದ ಹೊರಗಿದ್ದು, ಮೋದಿ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಪ್ರಧಾನಿ ವಿರುದ್ಧ ಟೀಕೆ ಮಾಡುತ್ತಿರುವುದು ಯಾರು ಗೊತ್ತಾ? ಅನಾರೋಗ್ಯವಿದೆ ಎಂದು ಹೇಳಿ ಜೈಲಿನಿಂದ ಹೊರಬಂದವರು ಎಂದು ಟೀಕಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.