Friday, September 29, 2023
spot_img
- Advertisement -spot_img

ಹಳೆಯ ಮನೆಗೆ ವಾಪಸ್ಸಾಗಲು ನಿರಾಕರಿಸಿದ ರಾಹುಲ್‌

ನವದೆಹಲಿ: ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನವದೆಹಲಿಯ 12 ತುಘಲಕ್ ಲೇನ್‌ನಲ್ಲಿರುವ ತಮ್ಮ ಬಂಗಲೆಗೆ ಮರಳಲು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಹುಲ್ ಗಾಂಧಿ ಅವರು ಪುನಃ ಸಂಸದ ಸ್ಥಾನ ಪಡೆದುಕೊಂಡ ನಂತರ, ಅವರು 2005ರಿಂದಲೂ ವಾಸವಿದ್ದ 12, ತುಘಲಕ್ ಲೇನ್ ಬಂಗಲೆಯನ್ನು ಮರು ಹಂಚಿಕೆ ಮಾಡಲು ಲೋಕಸಭಾ ವಸತಿ ಸಮಿತಿಯು ತೀರ್ಮಾನಿಸಿತ್ತು. ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ 15 ದಿನಗಳ ಗಡುವು ನೀಡಿತ್ತು. ಆ ವಾಯಿದೆ ಬುಧವಾರ ಮುಗಿದಿದ್ದು, ಈವರೆಗೂ ಅದಕ್ಕೆ ರಾಹುಲ್ ಗಾಂಧಿ ಒಪ್ಪಿಗೆ ಅಥವಾ ನಿರಾಕರಣೆ ಸೂಚಿಸಿಲ್ಲ.

ಪ್ರಸ್ತುತ ಲಡಾಖ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ತಾವು ವಾಸಿಸಲು ಬಯಸಿರುವ ಅಧಿಕೃತ ಬಂಗಲೆಗಾಗಿ ಇತರೆ ‘ಸಣ್ಣಪುಟ್ಟ’ ಆಯ್ಕೆಗಳನ್ನು ನೋಡುತ್ತಿದ್ದಾರೆ ಎನ್ನಲಾಗಿದೆ. 19 ವರ್ಷಗಳ ಕಾಲ 12 ತುಘಲಕ್ ಲೇನ್‌ನಲ್ಲಿರುವ ಟೈಪ್ 7 ಬಂಗಲೆಯಲ್ಲಿ ರಾಹುಲ್‌ ವಾಸಿಸುತ್ತಿದ್ದರು. ಕಾಂಗ್ರೆಸ್ ನಾಯಕನಿಗೆ ವಸತಿ ಸಮಿತಿಯು 7 ಸಫ್ದರ್‌ಜಂಗ್ ಲೇನ್ ಮತ್ತು 3 ಸೌತ್ ಅವೆನ್ಯೂ ಬಂಗಲೆಗಳ ಆಯ್ಕೆಯನ್ನು ನೀಡಿದೆ. ಅವರ ಉನ್ನತ ಮಟ್ಟದ ಭದ್ರತೆಯ ಹಿನ್ನೆಲೆಯಲ್ಲಿ ಪ್ರದೇಶವನ್ನು ಪರಿಶೀಲಿಸಲು ರಾಹುಲ್ ಗಾಂಧಿಯವರ ತಂಡವು ಎರಡೂ ಬಂಗಲೆಗಳಿಗೆ ಭೇಟಿ ನೀಡಿದೆ.

ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿ ದೋಷಿ ಎಂದು ತೀರ್ಮಾನಿಸಿದ್ದ ಸೂರತ್ ನ್ಯಾಯಾಲಯವು ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ್ದರಿಂದ ರಾಹುಲ್ ಲೋಕಸಭಾ ಸದಸ್ಯತ್ವ ಸ್ವಯಂಚಾಲಿತವಾಗಿ ರದ್ದುಗೊಂಡಿತ್ತು. ಹೀಗಾಗಿ ಅವರು ತಾವು ವಾಸವಿದ್ದ ಅಧಿಕೃತ ಬಂಗಲೆಯನ್ನು ತೆರವುಗೊಳಿಸಿದ್ದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles