Friday, September 29, 2023
spot_img
- Advertisement -spot_img

ದೇಶದ ಅತೀದೊಡ್ಡ ಯೋಜನೆಯಿದು; ‘ಗೃಹಲಕ್ಷ್ಮಿ’ಗೆ ಚಾಲನೆ ನೀಡಿ ರಾಹುಲ್ ಭಾಷಣ

ಮೈಸೂರು: ಮನೆಯ ಯಜಮಾನಿಗೆ ಮಾಸಿಕ 2 ಸಾವಿರ ರೂಪಾಯಿ ನೀಡುವ ‘ಗೃಹಲಕ್ಷ್ಮಿ’ ಯೋಜನೆಗೆ ರಾಹುಲ್ ಗಾಂಧಿ ಅದ್ದೂರಿಯಾಗಿ ಚಾಲನೆ ನೀಡಿದ್ದಾರೆ.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಟನ್ ಒತ್ತುವ ಮೂಲಕ ಯೋಜನೆ ಲೋಕಾರ್ಪಣೆ ಮಾಡಿ ಬಳಿಕ ಭಾಷಣ ಮಾಡಿದ್ದಾರೆ. ಇದು ಭಾರತದ ಅತ್ಯಂತ ದೊಡ್ಡ ಯೋಜನೆಯಾಗಿದೆ. 1 ಕೋಟಿ ಮಹಿಳೆಯರ ಖಾತೆಗೆ ಹಣ ಹಾಕಲಾಗಿದೆ. ವಿಶ್ವದಲ್ಲಿಯೇ ಎಲ್ಲಿಯೂ ಇಷ್ಟು ಹಣವನ್ನು ನೇರವಾಗಿ ಖಾತೆಗಳಿಗೆ ಹಾಕಿರುವ ಉದಾಹರಣೆಯಿಲ್ಲ. ಈ ಹಣ ಮಹಿಳೆಯರ ನಿತ್ಯದ ಬದುಕಿಗೆ ನೆರವಾಗಲಿದೆ. ಅವರು ತಮ್ಮ ಕುಟುಂಬ ನಿರ್ವಹಣೆಗಾಗಿ ಬೇಕಾದ ವಸ್ತುಗಳ ಖರೀದಿಸಬಹುದು. ಅವರು ತಮ್ಮ ಮಕ್ಕಳಿಗೆ ಪುಸ್ತಕ ಕೊಂಡುಕೊಳ್ಳಬಹುದು ಎಂದಿದ್ದಾರೆ.

ಇದನ್ನೂ ಓದಿ: BREAKING NEWS : ‘ಗೃಹಲಕ್ಷ್ಮಿ’ಯೋಜನೆಗೆ ಅಧಿಕೃತ ಚಾಲನೆ

ಪ್ರಧಾನಿ ಮೋದಿಯವರೇ ಖುದ್ದು ಹೇಳಿದ್ದಾರೆ ಈ ಯೋಜನೆ ಮಾಡಲು ಸಾಧ್ಯವಿಲ್ಲ ಎಂದು ಆದರೆ ನಾವು ಮಾಡಿ ತೋರಿಸಿದ್ದೇವೆ. ನಾವು ಘೋಷಿಸಿದಂತೆ ಯೋಜನೆಯನ್ನು ಈಡೇರಿಸಿದ್ದೇವೆ. ಈಡೇರಿಸಲು ಆಗದಂತಹ ಯೋಜನೆಯನ್ನು ನಾವು ಘೋಷಿಸುವುದೇ ಇಲ್ಲ ಎಂದಿದ್ದಾರೆ.

ಇದು ನಮ್ಮ ಯೋಜನೆಯಲ್ಲ ಇದು ನಿಮ್ಮ ಯೋಜನೆ ರಾಖಿ ಹಬ್ಬದಂದು ಸಹೋದರಿಯರಿಗೆ ನಮ್ಮ ಸರ್ಕಾರ ನೀಡಿರುವ ಭರವಸೆ ಇದು. ಇದು ಯಾವ ಬಂಡವಾಳಶಾಹಿಗಳು ಮಾಡಿದ ಯೋಜನೆಯಲ್ಲ ಎಂದಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles