ನವದೆಹಲಿ: ಖ್ಯಾತ ನಟಿ ಸ್ವರಾ ಭಾಸ್ಕರ್ ಹಾಗೂ ರಾಜಕಾರಣಿ ಫಹಾದ್ ಅಹ್ಮದ್ ಆರತಕ್ಷತೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಿಂಚಿದ್ದು, ನವದಂಪತಿಗಳಿಗೆ ಶುಭ ಕೋರಿದ್ದಾರೆ. ದೆಹಲಿಯಲ್ಲಿ ಆಯೋಜನೆಯಾಗಿದ್ದ ಮದುವೆಯ ಆರತಕ್ಷತೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದರು.
ರಾಹುಲ್ ಗಾಂಧಿ ಜೊತೆ ಹಲವು ಕಾಂಗ್ರೆಸ್ ಮುಖಂಡರೂ ಹಾಗೂ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಕೇಜ್ರಿವಾಲ್ ಸೇರಿ ಹಲವು ರಾಜಕೀಯ ವ್ಯಕ್ತಿಗಳು ಆಗಮಿಸಿದ್ದರು. ಈ ಕುರಿತ ಫೋಟೋ ಮತ್ತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
ರಾಹುಲ್ ಗಾಂಧಿ ಬಿಳಿ ಕುರ್ತಾ ಮತ್ತು ಪೈಜಾಮಾ ಧರಿಸಿದ್ದರು. ಸ್ವರಾ ಗುಲಾಬಿ ಮತ್ತು ಗೋಲ್ಡನ್ ಲೆಹೆಂಗಾದಲ್ಲಿ ಕಾಣಿಸಿಕೊಂಡರೆ, ಫಹಾದ್ ಕೆನೆ ಬಣ್ಣದ ಶೇರ್ವಾನಿ ಮತ್ತು ಬಿಳಿ ಪೈಜಾಮಾವನ್ನು ಧರಿಸಿದ್ದರು. ಸ್ವರಾ ಅವರು ಕಳೆದ ವರ್ಷ, ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಸ್ವರಾ ಭಾಸ್ಕರ್ ಪಾಲ್ಗೊಂಡಿದ್ದರು. ಅಂದಹಾಗೆ ಕಳೆದ ತಿಂಗಳು, ಸ್ವರಾ ಭಾಸ್ಕರ್ ತಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ನ್ಯಾಯಾಲಯದ ವಿವಾಹದಲ್ಲಿ ಗೆಳೆಯ ಫಹಾದ್ ಅಹ್ಮದ್ ಅವರೊಂದಿಗೆ ಮದುವೆಯಾದರು.