ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.ಸತ್ಯ, ಸಾಹಸ, ಬಲಿದಾನ ಇದುವೆ ಗಾಂಧಿ ಕುಟುಂಬದ ಪರಂಪರೆ ಎಂದಿದ್ದಾರೆ.
Rahul Gandhi’s New Istagram Post: Truth, courage and sacrifice this is our heritage, and this is also our strength
ಮೋದಿ ಉಪನಾಮದ ಹೇಳಿಕೆಗೆ ಸಂಬಂಧಿಸಿದಂತೆ 2 ವರ್ಷಗಳ ಕಾಲ ರಾಹುಲ್ ಗಾಂಧಿಗೆ ಜೈಲುಶಿಕ್ಷೆ ವಿಧಿಸಿದೆ 30 ದಿನಗಳ ಜಾಮೀನಿನ ಮೇಲೆ ರಾಹುಲ್ ಹೊರಗಿದ್ದಾರೆ. ರಾಜೀವ್ ಗಾಂಧಿ ಅಂತ್ಯಕ್ರಿಯೆ ವೇಳೆ 10 ಮೈಲುಗಳ ದೂರದವರೆಗೂ ಲಕ್ಷಾಂತರ ಮಂದಿ ಸೇರಿದ್ದರು. ಅವರ ಪಾರ್ಥಿವ ಶರೀರದ ಮೇಲೆ ತ್ರಿವರ್ಣ ಧ್ವಜವನ್ನು ಹಾಕಿ ಗೌರವ ಸೂಚಿಸಲಾಗಿತ್ತು. ಈಗ ಹುತಾತ್ಮನ ಮಗನನ್ನು ದೇಶದ್ರೋಹಿ ಎಂದು ಕರೆಯಲಾಗುತ್ತಿದೆ, ದೇಶಭಕ್ತಿಯನ್ನು ಪ್ರಶ್ನಿಸಲಾಗುತ್ತಿದೆ ಮೀರ್ ಜಾಫರ್ ಎಂದು ಕರೆಯಲಾಗುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ಇನ್ನೂ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ದೋಷಿ ಆದ ಹಿನ್ನೆಲೆ ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್ ಗಾಂಧಿ ತಮ್ಮ ಟ್ವಿಟರ್ ಬಯೋವನ್ನು ಬದಲಾಯಿಸಿದ್ದಾರೆ. ಸಂಸದ ಸ್ಥಾನದಿಂದ ಅನರ್ಹಗೊಂಡ ಒಂದು ದಿನದಲ್ಲಿಯೇ ಟ್ವಿಟರ್ ಬಯೋ ಬದಲಾಯಿಸಿರುವ ರಾಹುಲ್ ಗಾಂಧಿ ‘ಅನರ್ಹ ಸಂಸದ’ ಎಂದು ಬರೆದುಕೊಂಡಿದ್ದಾರೆ.
ಈ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ದಾಖಲಿಸಿದ್ದಾರೆ.2019ರ ಲೋಕಸಭಾ ಚುನಾವಣೆ ವೇಳೆ ಕೋಲಾರದಲ್ಲಿ ರಾಹುಲ್ ಗಾಂಧಿ, ಅದು ಹೇಗೆ ಎಲ್ಲ ಕಳ್ಳರು ಮೋದಿ ಎಂಬ ಸರ್‌ನೇಮ್ ಹೊಂದಿರುತ್ತಾರೆ ಎಂದು ಹೇಳಿಕೆ ನೀಡಿದ್ದರು. ಇವ್ರ ವಿರುದ್ಧ ಗುಜರಾತ್‌ನ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ರು.