ಹರಿಯಾಣ : ಆರ್ ಎಸ್ ಎಸ್ ನವರು ಹರ ಹರ ಮಹಾದೇವ, ಸೀತಾರಾಮ ಎಂದು ಜಪಿಸುವುದೇ ಇಲ್ಲ. ಇವು ಭಾರತದ ಮೌಲ್ಯಗಳು ಮತ್ತು ತಪಸ್ ಶಕ್ತಿಗೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ನಾಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಯಲ್ಲಿ ಮಾತನಾಡಿ, ಸಂಘದ ಸದಸ್ಯರನ್ನು ’21ನೇ ಶತಮಾನದ ಕೌರವರು’ ಎಂದು ಜರಿದಿದ್ದಾರೆ.
‘ಹರಿಯಾಣ ಮಹಾಭಾರತದ ನಾಡು. ಆರ್ ಎಸ್ಎಸ್ ಕಾರ್ಯಕರ್ತರು ಜೈಶ್ರೀರಾಮ್ ಎಂಬುದನ್ನು ಬಿಟ್ಟು ಬೇರೆ ಏನೂ ಹೇಳುವುದಿಲ್ಲ. ಜೈ ಸೀತಾರಾಮ, ಹರಹರ ಮಹಾದೇವ ಎಂದು ಕೂಗಲ್ಲ. ನಾನು ಈ ಬಗ್ಗೆ ಹಲವು ಬಾರಿ ಯೋಚಿಸಿದ್ದೇನೆ. ಕಾರಣ ಏನೆಂದರೆ ಭಗವಂತನಾದ ಶಿವನು ‘ತಪಸ್ವಿ’. ಆ ತಪಸ್ಸಿನ ಮೇಲೆ ದಾಳಿ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಅವರು ಹರನನ್ನು ಭಜಿಸುವುದಿಲ್ಲ’ ಎಂದು ಟೀಕಿಸಿದರು.
‘ರಾಮನಷ್ಟೇ ಸೀತಾದೇವಿಯೂ ಮುಖ್ಯ. ಸೀತೆಯನ್ನು ದೂರವಿಟ್ಟಿದ್ದಾರೆ. ಯಾವುದೇ ಕಾಂಗ್ರೆಸ್ ಕಾರ್ಯಕರ್ತರು ಸಂಘದವರನ್ನು ಭೇಟಿಯಾದಾಗ ಜೈ ಸೀತಾರಾಮ ಎಂದು ಸ್ವಾಗತಿಸಬೇಕು ಎಂದು ಪ್ರತಿಪಾದಿಸಿದರು.
ಶರ್ಟ್‌ಗಳಲ್ಲಿ, ಮೈಕ್‌ಗಳಲ್ಲಿ, ಧರಿಸುವ ಶೂಗಳು, ಮೊಬೈಲ್ ಫೋನ್‌ಗಳ ಹಿಂಭಾಗದಲ್ಲಿ ಮೇಡ್ ಇನ್ ಚೀನಾ ಎಂದು ಬರೆಯಲಾಗಿದೆ. ಈ ಚೀನಾ ನಿರ್ಮಿತ ವಸ್ತುಗಳಿಂದ ಬೇಸತ್ತಿದ್ದೇನೆ. ನನ್ನ ಆಸೆಯೆಂದರೆ, ಬೀಜಿಂಗ್‌ನಲ್ಲಿರುವ ಯುವಕನೊಬ್ಬ ‘ಮೇಡ್ ಇನ್ ಕುರುಕ್ಷೇತ್ರ’ ಎಂದು ಬರೆದಿರುವ ಫೋನ್ ನ್ನು ಹಿಡಿದಿರಬೇಕು ಅದನ್ನು ಸರ್ಕಾರ ಮಾಡಬೇಕು ಎಂದು ಹೇಳಿದರು.