ನವದೆಹಲಿ: ದೇಶಾದ್ಯಂತ ಕೋವಿಡ್-19 ಅಬ್ಬರ ಜೋರಾಗಿದ್ದು, ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಕಂಡುಬರ್ತಾ ಇದ್ದು, ಒಂದೇ ದಿನದಲ್ಲಿ 700ಕ್ಕೂ ಹೆಚ್ಚು ಕೋವಿಡ್-19 ಪ್ರಕರಣಗಳು ದಾಖಲಾಗಿವೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 4,623ಕ್ಕೆ ಏರಿಕೆಯಾಗಿದೆ. ಹೀಗಾಗಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ತಕ್ಷಣವೇ ಪರಿಹರಿಸಬೇಕಾದ ಸಮಸ್ಯೆಯ ಬಗ್ಗೆ ಗಮನ ಹರಿಸಿದ್ದು, ಮುನ್ನೆಚ್ಚರಿಕೆ ವಹಿಸಲು ಕರ್ನಾಟಕ ಸೇರಿ ಇತರೆ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆರಾಜೇಶ್ ಭೂಷಣ್ ಬರೆದಿದ್ದಾರೆ.
ಕಡಿಮೆ ಸಂಖ್ಯೆಯ ಹೊಸ ಪ್ರಕರಣಗಳು, ಅಷ್ಟೇ ಕಡಿಮೆ ಸಂಖ್ಯೆಯ ಆಸ್ಪತ್ರೆಗೆ ದಾಖಲಾಗಿರುವ ಮತ್ತು ಕೋವಿಡ್-19 ಲಸಿಕೆ ವ್ಯಾಪ್ತಿಗೆ ಸಂಬಂಧಿಸಿದಂತೆ ಗಮನಾರ್ಹ ಪ್ರಗತಿಗಳ ಹೊರತಾಗಿಯೂ, ಜಾಗರೂಕರಾಗಿರಲು ಮತ್ತು ಐದು ಪಟ್ಟು ಕಾರ್ಯತಂತ್ರದ ಮೇಲೆ ಕೇಂದ್ರೀಕರಿಸುವ ಅವಶ್ಯಕತೆಯಿದೆ ಮತ್ತು ಕೋವಿಡ್ ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸುವ ಬಗ್ಗೆ ಪತ್ರದಲ್ಲಿ ತಿಳಿಸಿದ್ದಾರೆ.ವಿವಿಧ ರಾಜ್ಯಗಳಲ್ಲಿ ಕೋವಿಡ್-19 ಪರೀಕ್ಷೆ ಪಾಸಿಟಿವ್ ದರಗಳಲ್ಲಿ ಹೆಚ್ಚಳವಾಗಿದೆ.
ಸಕ್ರಿಯ ಪ್ರಕರಣಗಳು 0.01 ಪ್ರತಿಶತವನ್ನು ಒಳಗೊಂಡಿವೆ. ಆದರೆ, ಕೋವಿಡ್-19 ಚೇತರಿಕೆ ದರವು 98.80 ಪ್ರತಿಶತದಷ್ಟು ದಾಖಲಾಗಿದೆ ಎಂದು ಆರೋಗ್ಯ ಸಚಿವಾಲಯದ ವೆಬ್‌ಸೈಟ್ನಲ್ಲಿ ತಿಳಿಸಲಾಗಿದೆ.