Sunday, October 1, 2023
spot_img
- Advertisement -spot_img

ಶಾಲಾ ಬಾಲಕಿಯರೊಂದಿಗೆ ರಕ್ಷಾ ಬಂಧನ ಆಚರಿಸಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿಯಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ರಕ್ಷಾ ಬಂಧನವನ್ನು ಆಚರಿಸಿದರು. ದೆಹಲಿಯಲ್ಲಿ ಶಾಲಾ ಬಾಲಕಿಯರು ಪ್ರಧಾನಿಯವರಿಗೆ ರಾಖಿ ಕಟ್ಟಿದ್ದು, ಅವರ ಜೊತೆ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದಾರೆ.

ಇದಕ್ಕೂ ಮುನ್ನ ಟ್ವಿಟ್ಟರ್ ನಲ್ಲಿ ಪಿಎಂ ಮೋದಿ, ಜನರಿಗೆ ಶುಭಾಶಯ ಕೋರಿ, ಅಕ್ಕ-ತಂಗಿಯರ ನಡುವಿನ ಅವಿನಾಭಾವ ವಿಶ್ವಾಸ ಮತ್ತು ಅಪಾರ ಪ್ರೀತಿಗೆ ಸಮರ್ಪಿತವಾಗಿರುವ ಈ ಪವಿತ್ರ ಹಬ್ಬವು ನಮ್ಮ ಸಂಸ್ಕೃತಿಯ ಪವಿತ್ರ ಪ್ರತಿಬಿಂಬವಾಗಿದೆ ಮತ್ತು ಇದು ಜನರ ಜೀವನದಲ್ಲಿ ವಾತ್ಸಲ್ಯ ಮತ್ತು ಸಾಮರಸ್ಯದ ಭಾವನೆಗಳನ್ನು ಬಲಪಡಿಸುತ್ತದೆ ಎಂದು ಹಾರೈಸಿದರು.

ಇದನ್ನೂ ಓದಿ : ಪಂಚರಾಜ್ಯಗಳ ಚುನಾವಣೆಗೆ ಭರ್ಜರಿ ಸಿದ್ಧತೆಗೆ ಮುಂದಾದ ಬಿಜೆಪಿ!

ಗಡಿ ಕಾಯುತ್ತಿದ್ದ ಸೈನಿಕರ ರಕ್ಷಾ ಬಂಧನ

ಜಮ್ಮುವಿನ ಅಖ್ನೂರ್ ಸೆಕ್ಟರ್‌ನಲ್ಲಿ ನಿಯೋಜನೆಗೊಂಡಿರುವ ಸೇನಾ ಯೋಧರಿಗೆ ರಕ್ಷಾ ಬಂಧನ ಸಂಭ್ರಮಾಚರಣೆ ಆರಂಭವಾಗಿದೆ. ಅಖ್ನೂರ್ ಸೆಕ್ಟರ್‌ನಲ್ಲಿ ದೇಶದ ಗಡಿ ಕಾಯುತ್ತಿದ್ದ ಸೈನಿಕರಿಗೆ ಸ್ಥಳೀಯ ಮಹಿಳೆಯರು ‘ರಾಖಿ’ ಕಟ್ಟಿ ಶುಭ ಹಾರೈಸಿದ್ದಾರೆ. ರಕ್ಷಾ ಬಂಧನ, ಅಥವಾ ರಾಖಿ, ಒಡಹುಟ್ಟಿದವರ ನಡುವಿನ ಪ್ರೀತಿ ಮತ್ತು ಸ್ನೇಹದ ಸಂಪರ್ಕವನ್ನು ನೆನಪಿಸುತ್ತದೆ ಎಂದು ಯೋಧರೊಬ್ಬರು ಹೇಳಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles