Wednesday, May 31, 2023
spot_img
- Advertisement -spot_img

ಪ್ರತಾಪ್‌ ಸಿಂಹ ಪ್ರತಿಭಟನೆ ಮಾಡೋದು ಬೇಡ, ಗ್ಯಾರಂಟಿ ಜಾರಿ ಮಾಡ್ತೇವೆ : ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು: ಪ್ರತಾಪ್‌ ಸಿಂಹ ಯಾವ ಪ್ರತಿಭಟನೆ ಮಾಡುವುದು ಬೇಕಿಲ್ಲ. ಎಲ್ಲ ಬೇಡಿಕೆ ಈಡೇರಿಸುತ್ತೇವೆ ಎಂದು ಸಚಿವ ರಾಮಲಿಂಗರೆಡ್ಡಿ ತಿರುಗೇಟು ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿ, ಒಂದು ವೇಳೆ ಷರತ್ತು ವಿಧಿಸಿದರೆ ಜೂನ್​ 1ರಿಂದ ಹೋರಾಟ ಮಾಡುತ್ತೇವೆ ಗ್ಯಾರಂಟಿಗಳ ಯೋಜನೆಗಳಿಗೆ ಷರತ್ತುಗಳು ಇಲ್ಲದೆ ಗ್ಯಾರಂಟಿಗಳನ್ನು ಜಾರಿಮಾಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದರು.

ನಮ್ಮ ಸರ್ಕಾರ ಬಂದು ಒಂದು ವಾರ ಆಗಿದೆ. ನಾವು ಎಲ್ಲ ಬೇಡಿಕೆ ಈಡೇರಿಸುತ್ತೇವೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ 600 ಭರವಸೆ ನೀಡಿತ್ತು ಇದರಲ್ಲಿ 60 ಅಷ್ಟೇ ಈಡೇರಿಸಿದೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಬ್ಬರಿಗೂ 15 ಲಕ್ಷ ನೀಡುವುದಾಗಿ ಹೇಳಿದ್ರು. ಎಲ್ಲರ ಖಾತೆಗೂ ಹಣ ಹಾಕಿದ್ರಾ ಎಂದು ಪ್ರಶ್ನಿಸಿದರು.

ಸಿಟಿ ರವಿ, ಡಾ. ಕೆ. ಸುಧಾಕರ್, ಪಿ ರಾಜೀವ್ ಹಾಗೂ ರೇಣುಕಾಚಾರ್ಯ ಎಲ್ಲರೂ ಮನೆ ಸೇರಿದ್ದಾರೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಜೂನ್ 1 ರವರೆಗೆ ಕಾಯುತ್ತೇನೆ , ಗ್ಯಾರಂಟಿ ಕಾರ್ಡ್ ನಲ್ಲಿ ಕಂಡೀಷನ್ ಅಪ್ಲೈ ಎಲ್ಲೂ ಹಾಕಿಲ್ಲ, ಕಂಡೀಷನ್ ಹಾಕಿದ್ರೆ ಜೂನ್ 1 ರಿಂದ ಹೋರಾಟ ಮಾಡ್ತೀನಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದರು. ಷರತ್ತು ವಿಧಿಸಿದರೆ ಜೂನ್ 1 ರಿಂದ ಹೋರಾಡುತ್ತೇವೆ , ನಿಮ್ಮ ಮತ ನೋಡಿ ಯಾರೂ ಮತ ಹಾಕಿಲ್ಲ ಎಂದು ತಿಳಿಸಿದ್ದರು.

Related Articles

- Advertisement -

Latest Articles