ರಾಮನಗರ : ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಕನಕಪುರಕ್ಕೆ ಸ್ಥಳಾಂತರ ಮಾಡಿದ್ದನ್ನು ವಿರೋಧಿಸಿ ರಾಮನಗರ ಬಂದ್ ಮಾಡಲಾಗಿದೆ.
ಸ್ವಯಂಚಾಲಿತವಾಗಿ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಎಪಿಎಂಸಿ ಮಾರುಕಟ್ಟೆ ಖಾಲಿ ಖಾಲಿಯಾಗಿದೆ. ರಾಮನಗರ ಪಟ್ಟಣದಲ್ಲಿ ಎಲ್ಲ ಅಂಗಡಿಗಳಿಗೆ ಬೀಗ ಹಾಕಿ ಸಿಎಂ, ಡಿಸಿಎಂ, ಡಿಕೆ ಸುರೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಇಬ್ಬರು ಅಸಹಾಯಕರು ಒಂದಾಗ್ತಿದ್ದಾರೆ : ಬಿಜೆಪಿ-ಜೆಡಿಎಸ್ ಮೈತ್ರಿಗೆ ಶೆಟ್ಟರ್ ವ್ಯಂಗ್ಯ
ಅಂದಹಾಗೆ ಮೆಡಿಕಲ್ ಕಾಲೇಜು ಹೋರಾಟ ಸಮಿತಿಗೆ ಎಪಿಎಂಸಿ ವರ್ತಕರು, ವ್ಯಾಪಾರಿ, ರೈತರಿಂದ ಭರ್ಜರಿ ಸ್ಪಂದನೆ ದೊರೆತಿದೆ, ಮೆಡಿಕಲ್ ಕಾಲೇಜು ರಾಮನಗರದಲ್ಲೇ ಇರಬೇಕು ಎಂದು ಆಗ್ರಹಿಸಿರುವ ಹೋರಾಟಗಾರರು 420 ಡಿ.ಕೆ.ಶಿವಕುಮಾರ್ ಎಂದು ಧಿಕ್ಕಾರ ಕೂಗಿದ್ದಾರೆ.
ಬೆಂಗಳೂರು-ಹಳೇ ಮೈಸೂರು ರಸ್ತೆ ತಡೆದು ಪ್ರತಿಭಟನೆ ನಡೆದಿದ್ದು, ಕೆಎಸ್ಆರ್ ಟಿಸಿ ಬಸ್ ಗಳಿಗೆ ಪ್ರತಿಭಟನೆ ಬಿಸಿ ತಟ್ಟಿದೆ. ಶಾಲಾ ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳು ಪರದಾಡಿದ್ದಾರೆ. ರಾಮನಗರ ಐಜೂರು ವೃತ್ತದಲ್ಲಿ ರಸ್ತೆ ತಡೆ ನಡೆಸಿ, ಮೆಡಿಕಲ್ ಕಾಲೇಜು ಸ್ಥಳಾಂತರ ವಿರೋಧಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಮಾಡಲಾಗಿದೆ.
ರಸ್ತೆ ತಡೆದ ವೇಳೆ ಹೋರಾಟಗಾರರ ಜೊತೆ ಪೊಲೀಸರ ಮಾತಿನ ಚಕಮಕಿ ನಡೆದಿದೆ. ಭಾರತ್ ಜೋಡೋ ಯಾತ್ರೆ ವೇಳೆ ರಸ್ತೆ ಬಂದ್ ಮಾಡಿದ್ರಿ, ಆಗ ಯಾಕೆ ಸುಮ್ಮನೆ ಇರಲಿಲ್ಲ ಎಂದು ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ರು.
ರಾಮನಗರ ಬಂದ್ ಮಾಡಿ ಡಿಸಿಎಂ ಡಿಕೆ ಶಿವಕುಮಾರ್ , ಡಿಕೆ ಸುರೇಶ್ ವಿರುದ್ಧ ಅವರ ಸ್ವಂತ ಜಿಲ್ಲೆ ರಾಮನಗರದ ಜನ ತಿರುಗಿ ಬಿದ್ದಿದ್ದಾರೆ.ರಾಮನಗರ ತಾಲೂಕಿಗೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಡಿಕೆಶಿ ಸ್ವಕ್ಷೇತ್ರ ಕನಕಪುರಕ್ಕೆ ಶಿಫ್ಟ್ ಮಾಡಲಾಗಿದೆ. ಇದಕ್ಕೆ ರಾಮನಗರದ ಜನರಲ್ಲಿ ಅಸಾಮಾಧಾನ ಹುಟ್ಟುಹಾಕಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.