ಬೆಳಗಾವಿ : ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಾಮಪತ್ರ ಸಲ್ಲಿಸಿದರು. ಗುರುವಾರ ಗೋಕಾಕ್ ಪಟ್ಟಣದ ತಹಸೀಲ್ದಾರ ಕಚೇರಿಗೆ ಹೋಗಿ ಗೋಕಾಕ್ ಮತಕ್ಷೇತ್ರದ ಚುನಾವಣಾಧಿಕಾರಿ ಗೀತಾ ಕೌಲಗಿಯವರಿಗೆ ನಾಮಪತ್ರ ಸಲ್ಲಿಸಿದರು.
1985 ರಲ್ಲಿ ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿ ಕೇವಲ 4000 ಮತಗಳ ಅಂತರದಿಂದ ಸೋತಿದ್ದ ರಮೇಶ್ ಜಾರಕಿಹೊಳಿ ಈಗ ಎಂಟನೇ ಬಾರಿ ಸ್ಪರ್ಧಿಸಲು ಉಮೇದುವಾರಿಕೆ ಸಲ್ಲಿಸಿದ್ದಾರೆ. ಅಥಣಿ ಶಾಸಕ ಮಹೇಶ್ ಕಮಟಳ್ಳಿ, ಕಾಗವಾಡದ ಶ್ರೀಮಂತ ಪಾಟೀಲ್, ಅಧ್ಯಕ್ಷ ನಾಗೇಶ್ ಗೂ ಟಿಕೆಟ್ ಕೊಡಿಸುವಲ್ಲಿ ಜಾರಕಿಹೊಳಿಯವರು ಯಶಸ್ವಿಯಾಗಿದ್ದಾರೆ.
2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದು ನಂತರ 2019ರಲ್ಲಿ ಕಾಂಗ್ರೆಸ್ ತೊರೆದ ರಮೇಶ್ ಜಾರಕಿಹೊಳಿ ಬಿಜೆಪಿಗೆ ಸೇರಿದರು. ಜಾರಕಿಹೊಳಿ ಇದುವರೆಗೂ ಗೋಕಾಕ್‌ನಲ್ಲಿ ಸೋಲು ಕಂಡಿಲ್ಲ. ಉಪಚುನಾವಣೆ ಸೇರಿ ಇದುವರೆಗೂ 6 ಚುನಾವಣೆಯಲ್ಲಿ ರಮೇಶ್ ಜಾರಿಹೊಳಿ ಗೆಲುವು ಕಂಡಿದ್ದಾರೆ.