ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಿಡಿ ಬಿಡುಗಡೆ ಮಾಡೋದಾಗಿ ಹೆದರಿಸಿದ್ದಾರೆ ಆರೋಪ ಮಾಡಿದ್ದಾರೆ ಎಂದು ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿ, ಡಿಕೆಶಿವಕುಮಾರ್ ನನಗೆ ಬ್ಲಾಕ್ ಮೇಲ್ ಮಾಡಿದ್ದಾರೆ, ಎಲೆಕ್ಷನ್ ಸಮೀಪದಲ್ಲಿರುವಾಗಲೇ ಮಧ್ಯರಾತ್ರಿ 12.30ಕ್ಕೆ ನನಗೆ ಕರೆ ಮಾಡಿ ಸಿಡಿ ಬಿಡುಗಡೆ ಮಾಡುತ್ತೇನೆ, ಅಲ್ಲದೇ ಬೆಳಗಾವಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡದಂತೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ .
ಡಿಕೆ ಶಿವಕುಮಾರ್ ಮುಂಚೆ ಒಳ್ಳೆಯವನಿದ್ದ ಈಗ ಏಕೆ ಹೀಗೆ ಮಾಡುತ್ತಿದ್ದಾನೆ ಗೊತ್ತಿಲ್ಲ. ದಯವಿಟ್ಟು ಡಿಕೆ ಶಿವಕುಮಾರ್ ವಿಷಕನ್ಯೆಯಿಂದ ಹೊರಬರುವುದು ಬಹಳ ಒಳ್ಳೆಯದು. ಇಲ್ಲವಾದರೆ ಪಾಪ ಅವನೇ ಅಂತ್ಯವಾಗುತ್ತಾನೆ ಅಂತ ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ಮಾಡಿದರು.
ಬಿಡು ಮಗನೆ ನಾನು ಗಟ್ಟಿಯಾಗಿದ್ದೀನಿ ಅಂತ ಹೇಳಿದ್ದೇನೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಹಿಂದೆ ಸರಿಯಲ್ಲ ಅಂದರೇ ನಿನ್ನ ಬಿಡುವುದಿಲ್ಲ ಅಂತ ಹೇಳಿದ. ಬೇಕಾದ್ದೂ ಆಗಲಿ ಬಿಜೆಪಿ ನನ್ನ ಮೇಲೆ ವಿಶ್ವಾಸ ಇಟ್ಟಿದೆ ನಾನು ಹಿಂದೆ ಸರಿಯಲ್ಲ ಎಂದಿದ್ದೇನೆ ಎಂದು ತಿಳಿಸಿದರು.