ಬೆಂಗಳೂರು: ಮಾಜಿ ಸಂಸದೆ ರಮ್ಯಾ ರಾಜಕೀಯಕ್ಕೆ ಎಂಟ್ರಿಯಾಗುತ್ತಾರಾ ಅನ್ನೋದು ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಬಗ್ಗೆ ಎಐಸಿಸಿ ಸಭೆಯಲ್ಲಿ ಚರ್ಚೆ ನಡೆದಿದ್ದು ಮೂರು ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಿಂದ ಕಣಕ್ಕೆ ಇಳಿಸುವ ಬಗ್ಗೆ ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ ಎಂದು ತಿಳಿದುಬಂದಿದೆ.
ಚುನಾವಣಾ ಸಮಿತಿ ಸಭೆಯಲ್ಲಿ ರಮ್ಯಾ ರಾಜಕಾರಣಕ್ಕೆ ವಾಪಸ್ ಬರಲು ಸಕಾಲ ಎಂದು ಕೆಲ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಮ್ಯಾ ಜೊತೆಯೂ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಕಾಂಗ್ರೆಸ್ ಮುಖಂಡರು ಪದ್ಮನಾಭನಗರ ಕ್ಷೇತ್ರದ ವಿಚಾರವಾಗಿ ಸಭೆ ಕರೆದಿದ್ದಾರೆ.
ಪದ್ಮನಾಭನಗರ ಮೊದಲ ಆದ್ಯತೆಯಾಗಿದ್ದರೆ ಮಂಡ್ಯ ಎರಡನೇ ಆದ್ಯತೆಯಾಗಿದೆ. ಚನ್ನಪಟ್ಟಣ ಮೂರನೇ ಆದ್ಯತೆಯಾಗಿದೆ. ಒಂದು ವೇಳೆ ಚನ್ನಪಟ್ಟಣದಲ್ಲಿ ಕಣಕ್ಕಿಳಿದರೆ ಕುಮಾರಸ್ವಾಮಿ ನೇರ ಎದುರಾಳಿಯಾಗಲಿದ್ದಾರೆ. ಸಭೆಯಲ್ಲಿ ಮಾತ್ರ ರಮ್ಯಾ ಭಾಗಿಯಾಗಲಿದ್ದಾರ ಇಲ್ವಾ ? ಅನ್ನೋದು ಮಾತ್ರ ಗೊತ್ತಾಗಬೇಕಿದೆ. ರಮ್ಯಾ ಈ ವದಂತಿಗೆ ಸ್ಪಷ್ಟನೆಯೂ ಕೊಟ್ಟಿಲ್ಲ, ನಿರಾಕರಿಸಿಯೂ ಇಲ್ಲ.