ತುಮಕೂರು: ಕೋಲಾರದಲ್ಲಿ ಒಕ್ಕಲಿಗರ ಸಂಖ್ಯೆ ಹೆಚ್ಚಿರುವುದರಿಂದ ಸಿದ್ದರಾಮಯ್ಯನವರು ಕೋಲಾರ ಸ್ಫರ್ಧೇಯಿಂದ ಹಿಂದೆ ಸರಿಯಲಿದ್ದಾರೆ ಎಂದು ಸಚಿವ ಆರ್ ಅಶೋಕ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಕೋಲಾರದಲ್ಲಿ ಈಗಾಗಲೇ ಉರಿಗೌಡ, ನಂಜೇಗೌಡ ಕಿಚ್ಚು ಹೊತ್ತಿರೋದ್ರಿಂದ ಸಿದ್ದರಾಮಯ್ಯ ಜಾಗ ಖಾಲಿ ಮಾಡಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸೋದಿಲ್ಲ, ಇಷ್ಟು ದಿನವಾದ್ರೂ ಕ್ಷೇತ್ರ ಹುಡುಕಾಟದಲ್ಲಿಯೇ ತೊಡಗಿದ್ದಾರೆ , ಅವರಿಗೆ ಕರ್ನಾಟಕ ಸೇಫ್ ಅಲ್ಲ, ಟಿಪ್ಪು ಎಂದು ಹೇಳುವುದನ್ನು ಬಿಟ್ಟರೆ ಅವರಿಗೆ ಕರ್ನಾಟಕದಲ್ಲಿ ಎಲ್ಲಿಯಾದರೂ ಒಂದು ಸುರಕ್ಷಿತವಾದ ಕ್ಷೇತ್ರ ಲಭಿಸಲಿದೆ. ಎಲ್ಲಿಯವರೆಗೂ ಟಿಪ್ಪುನನ್ನು ಬಿಡಲ್ಲ, ಶಾದಿ ಭಾಗ್ಯವನ್ನು ಬಿಡಲ್ಲ ಅಲ್ಲಿವರೆಗೂ ಅವರು ಗೆಲ್ಲಲ್ಲ ಎಂದು ವ್ಯಂಗ್ಯವಾಡಿದರು.
ಇನ್ನೂ ರಾಹುಲ್ ಗಾಂಧೀಯವರು ಕೋಲಾರದಿಂದ ಸ್ಪರ್ಧಿಸೋದು ಬೇಡ ಎಂದು ಸಿದ್ದರಾಮಯ್ಯನವರಿಗೆ ಹೇಳಿದ್ದರು, ಅದರಂತೆ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೀಸೋ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಕೋಲಾರದಲ್ಲಿ ಸಿದ್ದರಾಮಯ್ಯ ಗೆಲುವು ಕಷ್ಟ ಎಂದು ಮಾಹಿತಿ ಪಡೆದಿರುವ ರಾಹುಲ್ ಸಿದ್ದರಾಮಯ್ಯಗೆ ಈ ಸಲಹೆ ನೀಡಿದ್ದಾರಂತೆ, ಸಲಹೆ ಸ್ವೀಕರಿಸಿರುವ ಸಿದ್ದರಾಮಯ್ಯ ಕೂಡಾ ಹೈಕಾಂಡ್ ತೀರ್ಮಾನಕ್ಕೆ ನಾನು ಬದ್ಧ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.