ಗಂಗಾವತಿ: ರೆಡ್ಡಿ ಹೊಸ ಪಕ್ಷ ಬಿಜೆಪಿಯ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ರೆಡ್ಡಿ ಹೊಸ ಪಕ್ಷ ಸ್ಥಾಪನೆ ಮಾಡಿರುವ ಹಿನ್ನೆಲೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಏನು ಪ್ರತಿತಂತ್ರ ಹೂಡಬೇಕು ಎಂಬುವುದರ ಬಗ್ಗೆ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಯೋಜನೆ ರೂಪಿಸಲಿದ್ದಾರೆ.
ಅಲ್ಲದೇ ಗಂಗಾವತಿಯಿಂದ ಸ್ಪರ್ಧಿಸುವುದಾಗಿ ರೆಡ್ಡಿ ಹೇಳಿದ್ದಾರೆ. ಇದು ಮುಂದಿನ 2023ರ ಚುನಾವಣೆಗೆ ಅಂಥ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂದು ತಮ್ಮ ನೂತನ ಪಾರ್ಟಿಗೆ ಹೆಸರನ್ನು ಘೋಷಿಸುವ ಮೂಲಕ ಮುಂದಿನ ಬಾರಿಯ ವಿಧಾನಸಭಾ ಚುನಾವಣೆಗೆ ರೆಡ್ಡಿ ಸಜ್ಜಾಗಿದ್ದಾರೆ. ನಾನಂತೂ ಬಿಜೆಪಿ ಪಕ್ಷದ ಟಿಕೆಟ್ ಅಕಾಂಕ್ಷಿಯಾಗಿದ್ದು, ಎರಡು ಬಾರಿ ಕ್ಷೇತ್ರದಿಂದ ಗೆದ್ದಿರುವೆ. ಜನರ ವಿಶ್ವಾಸ ಗಳಿಸಿಕೊಂಡಿರುವೆ. ಹೀಗಾಗಿ ಮತ್ತೊಮ್ಮೆ ಬಿಜೆಪಿ ಅವಕಾಶ ನೀಡಲಿದ್ದು, ಜನ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಶಾಸಕರಾಗಿರುವ ಪರಣ್ಣ ಮುನವಳ್ಳಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು,ಅವರಿಗೆ ಟಿಕೆಟ್ ಸಿಗುವ ಸಂಭವ ಇದೆ.ಆದರೆ ಜನಾರ್ದನ ರೆಡ್ಡಿ ಈ ಬಾರಿ ಸ್ಫರ್ಧಿಸೋದ್ರಿಂದ ಮತಗಳು ಹಂಚಿಹೋಗಲಿದ್ದು, ಬಿಜೆಪಿಯವರಿಗ ಕೊಂಚ ಆತಂಕ ಎದುರಾಗಿದೆ.