ನವದೆಹಲಿ: ನವ ಭಾರತ ನಿರ್ಮಾಣಕ್ಕೆ ಈ ಬಜೆಟ್ ಪೂರಕವಾಗಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ನಿರ್ಮಲಾ ಸೀತಾರಾಮನ್ ಅತ್ಯಂತ ಮಹತ್ವದ ಹಾಗೂ ಐತಿಹಾಸ ಬಜೆಟನ್ನು ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಈ ಬಜೆಟ್ ನವ ಭಾರತ ನಿರ್ಮಾಣಕ್ಕೆ ಪೂರಕವಾಗಿದೆ. ಜೊತೆಗೆ ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ಹಾಗೂ ಚೇತರಿಕೆ ಕಾಣುತ್ತಿರುವ ಭಾರತದ ಆರ್ಥಿಕತೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದ್ದಾರೆ.
ಕೋವಿಡ್ ಸೇರಿದಂತೆ ಗಂಭೀರ ಬಿಕ್ಕಟ್ಟಿನಿಂದ ಭಾರತವನ್ನು ಹೊರತಂದು ದಿಟ್ಟ ಹೆಜ್ಜೆ ಇಡಲು ಮಾರ್ಗದರ್ಶನ ಮಾಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದ ಎಂದು ಹೇಳಿದ್ದಾರೆ.
ಬಂಡವಾಳ, ಡಿಜಿಟಲೀಕರಣ, ಯುವಜನ ಕೌಶಲ್ಯ, ಹೂಡಿಕೆ, ಮಧ್ಯಮ ವರ್ಗದ ತೆರಿಗೆ ವಿನಾಯಿತಿ, ಸಮುದಾಯಗಳಿಗೆ ಸೌಲಭ್ಯ, ಸಹಕಾರಿ ಕ್ಷೇತ್ರಕ್ಕೆ ಸೌಲಭ್ಯ ಸೇರಿ ಅನೇಕ ಅವಕಾಶ ಈ ಬಜೆಟ್ ನೀಡಿದೆ ಎಂದರು. ಭಾರತ ಕೋವಿಡ್ ಮಹಾಮಾರಿಯಿಂದ ಚೇತರಿಸಿಕೊಳ್ಳುತ್ತಿದೆ. ಮಧ್ಯಮ ವರ್ಗದ ಜನರಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಈ ಮೂಲಕ ಈ ಬಜೆಟ್ ಜನಪಯೋಗಿಯಾಗಿದೆ ಎಂದು ಹೇಳಿದ್ದಾರೆ.