ಶಿವಮೊಗ್ಗ : ನಾವು ‘ಭಾರತ್ ಮಾತಾಕೀ ಜೈ ಎನ್ನುತೇವೆಯೇ ಹೊರತು ಇಂಡಿಯಾ ಮಾತಾಕೀ ಜೈ ಎಂದು ಹೇಳುವುದಿಲ್ಲ, ಹೀಗಾಗಿ ಈ ಬಗ್ಗೆ ಚರ್ಚೆಯಾಗುತ್ತಿರುವುದು ಬಹಳ ಒಳ್ಳೆಯ ವಿಷಯ. ನಮ್ಮ ದೇಶದ ವಿಚಾರದಲ್ಲಿ ನಾವು ಭಾವನಾತ್ಮಕವಾಗಿ ಇರಬೇಕಾದ ಅವಶ್ಯಕತೆ ಇದೆ. ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಇದನ್ನೂ ಓದಿ : ದೇಶದ ಹೆಸರು ಬದಲಾವಣೆ ಚರ್ಚೆ: ಕಾಂಗ್ರೆಸ್ ಸಂಸದೀಯ ಕಾರ್ಯತಂತ್ರದ ಸಭೆ ಕರೆದ ಸೋನಿಯಾ
ಭಾರತದ ಮರುನಾಮಕರಣದ ಬಗ್ಗೆ ದೇಶದಾದ್ಯಂತ ವ್ಯಾಪಕವಾಗಿ ಚರ್ಚೆ ನಡಿಯುತಿದ್ದು ಈ ಬಗ್ಗೆ ಮಾತನಾಡಿರುವ ಆರಗ ಅವರು, ಭಾರತ ಎಂಬುದು ನಮ್ಮ ಪರಂಪರೆಯ ಹೆಸರು. ನಮ್ಮ ದೇಶಕ್ಕೆ ‘ಭಾರತ’ ಎಂಬ ಹೆಸರು ಬರಲು ಕಾರಣವೇನು? ‘ಇಂಡಿಯಾ’ ಎಂಬ ಹೆಸರು ಎಲ್ಲಿಂದ ಬಂತು? ಈ ಬಗ್ಗೆ ಚರ್ಚೆಯಾಗುತ್ತಿರುವುದು ಬಹಳ ಒಳ್ಳೆಯ ವಿಷಯ. ನಮ್ಮ ದೇಶದ ವಿಚಾರದಲ್ಲಿ ನಾವು ಭಾವನಾತ್ಮಕವಾಗಿ ಇರಬೇಕಾದ ಅವಶ್ಯಕತೆ ಇದೆ. ಎಂದರು.
ಇದನ್ನೂ ಓದಿ : ‘ಕ್ಷೀರಭಾಗ್ಯ’ ದಶಮಾನೋತ್ಸವ ; ಮಧುಗಿರಿಯಲ್ಲಿ ಇಂದು ಅದ್ದೂರಿ ಕಾರ್ಯಕ್ರಮ
ಮಾತು ಮುಂದುವರಿಸಿದ ಅವರು ಇಂಡಿಯಾ ಎಂಬ ಹೆಸರಿಗೆ ಬಹಳ ಹಿನ್ನೆಲೆ ಇಲ್ಲ. ಭಾರತ ಎಂದು ಉಚ್ಚಾರಣೆ ಮಾಡಲು ಬ್ರಿಟಿಷರಿಗೆ ಬಾರದೆ ಇದ್ದುದ್ದರಿಂದ ಇಂಡಿಯಾ ಎಂದು ಕರೆದರು. ಇದಕ್ಕೆ ಹೆಚ್ಚು ಮಹತ್ವವಿಲ್ಲ. ಇಂಗ್ಲೀಷರ, ಮೊಘಲರ ಆಡಳಿತ ಕಾಲದಲ್ಲಿ ದೇಶದ ಇತಿಹಾಸವನ್ನು ತಿರುಚಲಾಯಿತು. ಆಗಿನ ಕಾಲದಲ್ಲಿ ಉಂಟಾಗಿದ್ದ ಲೋಪಗಳನ್ನು ಈಗ ಸರಿಪಡಿಸಲಾಗುತ್ತಿದೆ. ದೇಶದ ಹೆಸರು ‘ಭಾರತ’ವಾಗಲು ಈಗ ಚರ್ಚೆಯಾಗುತ್ತಿದೆ. ಮದ್ರಾಸ್ ಹೋಗಿ ಚೆನೈ ಆಗಿದೆ, ಬ್ಯಾಂಗಲೂರ್ ಹೋಗಿ ಬೆಂಗಳೂರು ಆಗಿದೆ. ಕೂರ್ಗ್ ಹೋಗಿ ಕೊಡಗು ಆಗಿದೆ. ಇವೆಲ್ಲ ನಮ್ಮ ಭಾವನಾತ್ಮಕವಾಗಿ ಆಗಿರುವಂತಹದ್ದು. ಸರ್ಕಾರ ಭಾರತ ಎಂದು ಹೆಸರಿಟ್ಟರೆ ಬಹಳ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಇದನ್ನೂ ಓದಿ : ‘ಗೇಮ್ ಚೇಂಜರ್ಸ್ ಎಂದು ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ನೇಮ್ ಚೇಂಜರ್ಸ್ ಆಗಿದೆ’
ಹಿನ್ನಲೆ : ಹಿನ್ನಲೆ : ಜಿ-20 ಶೃಂಗ ಸಭೆಯ ಔತಣಕೂಟದ ಆಮಂತ್ರಣ ಪತ್ರಗಳಲ್ಲಿ ಇಂಡಿಯಾವನ್ನು ‘ರಿಪಬ್ಲಿಕ್ ಆಫ್ ಭಾರತ್’ ಎಂದು ಬರೆಯಲಾಗಿದೆ. ಅದು ಅಲ್ಲದೆ ನಿನ್ನೆ ಪ್ರಧಾನಿ ಮೋದಿ ಅವರ ವಿದೇಶ ಪ್ರವಾಸದ ಪ್ರಕಟಣೆಯಲ್ಲಿ ‘ಪಿಎಂ ಆಫ್ ಇಂಡಿಯಾ’ ಬದಲಾಗಿ ‘ಪಿಎಂ ಆಫ್ ಭಾರತ್’ ಎಂದು ಬದಲಿಸಲಾಗಿದೆ. ನಾಳೆ ವಿಶೇಷ ಸಂಸತ್ತು ಅಧಿವೇಶನ ನಡೆಯಲಿದ್ದು, ಇಂಡಿಯಾ ಮರುನಾಮಕರಣದ ಬಗ್ಗೆ ಚರ್ಚೆಯಾಗುವ ಸಾಧ್ಯತೆಗಳಿವೆ. ಈ ಕುರಿತು ದೇಶದಲ್ಲಿ ಪರ ವಿರೋಧ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.