ನವದೆಹಲಿ : ತಮ್ಮ ಅತ್ಯುತ್ತಮ ವ್ಯಂಗ್ಯ ಚಿತ್ರಗಳಿಂದ ಜಾಗತಿಕ ಮನ್ನಣೆ ಪಡೆದಿದ್ದ ಖ್ಯಾತ ರಾಜಕೀಯ ವ್ಯಂಗ್ಯ ಚಿತ್ರಕಾರ ಅಜಿತ್ ನಿನನ್ ನಿಧನರಾಗಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದ ‘ನಿನಾನ್ಸ್ ವರ್ಲ್ಡ್’ ಕಾರ್ಟೂನ್ ಸರಣಿಯ ಮೂಲಕ ಅಜಿತ್ ನಿನನ್ ಪ್ರಸಿದ್ದಿ ಪಡೆದಿದ್ದರು. ಖ್ಯಾತ ವ್ಯಂಗ್ಯಚಿತ್ರಕಾರ ಅಬು ಅಬ್ರಹಾಂ ಅವರ ಸೋದರಳಿಯನಾಗಿರುವ ನಿನನ್, ಶಾಲೆಯಲ್ಲಿದ್ದಾಗ 1960ರ ದಶಕದಲ್ಲಿ ಅವರ ಮೊದಲ ಕಾರ್ಟೂನ್ ಅನ್ನು ಪ್ರಕಟಿಸಿದ್ದರು.
ರಾಜಕೀಯದ ಹೊರತಾಗಿ, ಅಜಿತ್ ನಿನನ್ ಸಾಮಾಜಿಕ ಸಮಸ್ಯೆಗಳು ಮತ್ತು ದೈನಂದಿನ ಆಗು-ಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸಿ ಹಾಸ್ಯಮಯ ರೀತಿಯಲ್ಲಿ ತಿಳಿಸುತ್ತಿದ್ದರು. ಕುಟುಂಬದ ಬಜೆಟ್ ನಿರ್ವಹಿಸುವ ಮತ್ತು ಹೆಚ್ಚು ಜಾಗತೀಕರಣಗೊಂಡ ಸಮಾಜದಲ್ಲಿ ಮಕ್ಕಳನ್ನು ಬೆಳೆಸುವ ಕೆಲವು ಸಾರ್ವತ್ರಿಕ ಒತ್ತಡಗಳ ಬಗ್ಗೆ ವ್ಯಂಗ್ಯ ಚಿತ್ರಗಳ ಮೂಲಕವೇ ಮಾತನಾಡುತ್ತಿದ್ದು.
ಇದನ್ನು ಓದಿ : Rahul Gandhi : ಯುರೋಪ್ ಸಂಸದರ ಜೊತೆ ರಾಹುಲ್ ಗಾಂಧಿ ದುಂಡು ಮೇಜಿನ ಸಭೆ!
ನಿನನ್ ಅಗಲಿಕೆಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕಾರ್ಟೂನಿಸ್ಟ್, ಇದು ನಂಬಲಸಾಧ್ಯವಾದ ಸುದ್ದಿ!, ದಿಗ್ಗಜ ವ್ಯಂಗ್ಯಚಿತ್ರಕಾರ ಅಜಿತ್ ನಿನನ್ ನಮ್ಮನ್ನು ಅಗಲಿದ್ದಾರೆ. ಕಳೆದ ವರ್ಷ ನಾವು ಅವರಿಗೆ ಭಾರತೀಯ ಕಾರ್ಟೂನ್ ಗ್ಯಾಲರಿಯಲ್ಲಿ ಪ್ರತಿಷ್ಠಿತ ಬಾರ್ಟನ್ ಜೀವಮಾನ ಸಾಧನೆ ಪ್ರಶಸ್ತಿ 2022 ನೀಡಿ ಗೌರವಿಸಿದ್ದೆವು. ಅವರ ಕುಟುಂಬಕ್ಕೆ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.