ದಾವಣಗೆರೆ : ಬಿಜೆಪಿ ಉಳಿಬೇಕು, ಪಕ್ಷವನ್ನು ಕಟ್ಟಿ ಬೆಳೆಸಿದವರಿಗೆ ಅನ್ಯಾಯವಾಗಬಾರದು ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಕಿಡಿ ಕಾರಿದ್ದಾರೆ.
ಇದನ್ನೂ ಓದಿ : ‘ನಾಡಿನ ಅಭಿವೃದ್ಧಿಗಾಗಿ ನಾವು ಒಂದಾಗಬೇಕಿದೆಯೇ ಹೊರತು ನಮ್ಮ ಅಭಿವೃದ್ಧಿಗಲ್ಲ’
ನಗರದಲ್ಲಿ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಡು ಮುಟ್ಟದ ಸೊಪ್ಪಿಲ್ಲ, ಹಾಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೋಡದ ಹಳ್ಳಿ ಇಲ್ಲ. ಪಕ್ಷದ ಬಗ್ಗೆ ಮಾತನಾಡಿದ್ದಕ್ಕೆ ನನಗೆ ನೋಟೀಸ್ ಕಳಿಸಿದ್ದಾರೆ. ಮೊದಲು ಯಡಿಯೂರಪ್ಪ ಅವರ ಬಗ್ಗೆ ಯಾರೆಲ್ಲ ಮಾತಾಡಿದ್ದಾರೆ ಅವರಿಗೆ ನೋಟೀಸ್ ಕಳಿಸಲಿ. ಬಿಜೆಪಿ ಪಕ್ಷ ಸಾಕಷ್ಟು ಡ್ಯಾಮೇಜ್ ಆದಮೇಲೆ, ಯಡಿಯೂರಪ್ಪ ಅವರನ್ನು ಮುಂದೆ ತಂದಿದ್ದಾರೆ. ಅವರನ್ನು ಕಡೆಗಣಿಸಿದ್ದೆ ಬಿಜೆಪಿಗೆ ಸೋಲಾಗಿದೆ.ಈಗ ವೋಟ್ ಬೇಕು ಅಂತ ಯಡಿಯೂರಪ್ಪ ಅವರ ನಾಯಕತ್ವ ಅಂತಾ ಹೇಳ್ತಾ ಇದ್ದಾರೆ. ಅವರು ಒಬ್ಬ ಮಾಸ್ ಲೀಡರ್; ದೇಶದಲ್ಲಿ ಮೋದಿಯನ್ನು ಹೇಗೆ ಇಷ್ಟ ಪಡುತ್ತಾರೋ ಹಾಗೆ ಕರ್ನಾಟಕದಲ್ಲಿ ಯಡಿಯೂರಪ್ಪ ಅವರನ್ನು ಇಷ್ಟ ಪಡುತ್ತೇವೆ ಎಂದರು.
ಇದನ್ನೂ ಓದಿ : ಒಂದು ತಿಂಗಳಿಗೆ ಬಂತು 10ಲಕ್ಷ ಕರೆಂಟ್ ಬಿಲ್ : ಶಾಕ್! ಆದ ಅಂಗಡಿ ಮಾಲೀಕ
ಇನ್ನೂ ಮುಂದುವರೆದು ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲೋಕೆ ಆಗದೇ ಇರೋರು ಪಕ್ಷದ ಜವಾಬ್ದಾರಿ ವಹಿಸಿಕೊಂಡಿದ್ದರು. ಪಕ್ಷ ಉಳಿಬೇಕು, ಪಕ್ಷಕ್ಕಾಗಿ ಯಾರೆಲ್ಲ ಹೋರಾಟ ನಡೆಸಿದ್ದರೋ ಅವರಿಗೆಲ್ಲ ನ್ಯಾಯ ಸಿಗಲೇ ಬೇಕು. ಪಕ್ಷದಲ್ಲಿ ಸಮಸ್ಯೆ ಇದೆ. ನಾನು ಎಂಪಿ ಆಕಾಂಕ್ಷಿಯಾಗಿದ್ದೇನೆ. ಟಿಕೆಟ್ ಗಾಗಿ ಕಾದು ನೋಡುತ್ತೇನೆ; ಟಿಕೆಟ್ ಸಿಗದೇ ಇದ್ದರೆ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.