Tuesday, March 28, 2023
spot_img
- Advertisement -spot_img

2ಎ ಮೀಸಲಾತಿ ಹೋರಾಟ ಮುಗಿದು ಹೋದ ಕಥೆಯಾಗಿದೆ :ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ : ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟ ಮುಗಿದು ಹೋದ ಕಥೆಯಾಗಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿ, ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಅವರು ಏನಬೇಕಾದರೂ ಮಾಡಲಿ. ಇದರ ಬಗ್ಗೆ ನಾನು ಟೀಕೆ ಮಾಡುವುದಿಲ್ಲ. ಅವರು ಕಾನೂನು ತಜ್ಞರ ಜೊತೆ ಕುಳಿತು ಚರ್ಚೆ ಮಾಡಲಿ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕುಳಿತು ಹೋರಾಟ ಮಾಡುವುದರಿಂದ ಮೀಸಲಾತಿ ಸಿಗುವಂತಿದ್ದರೆ, ಬಹಳ ಜನ ಬಂದು ಅಲ್ಲಿ ಹೋರಾಟ ಮಾಡುತ್ತಿದ್ದರು ಎಂದು ಜರಿದಿದ್ದಾರೆ.

ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಕ್ಷೇತ್ರ ಅಲ್ಲ, 25 ಕ್ಷೇತ್ರದಲ್ಲೂ ಸ್ಪರ್ಧೆ ಮಾಡಿದರೂ ಅವರಿಗೆ ಸೋಲು ಗ್ಯಾರಂಟಿ ಆಗಿದೆ. ಕೋಲಾರದಲ್ಲಿ ಅವರ ಗೆಲ್ಲುವ ಚಾನ್ಸ್ ಇಲ್ಲವೇ ಇಲ್ಲ. ಕಾಂಗ್ರೆಸ್ ನಾಯಕರು ಮತ್ತು ದೇವೇಗೌಡರು ಸೇರಿ ಸಿದ್ದುಗೆ ಸೋಲಿಸುವುದು ಗ್ಯಾರಂಟಿ ಆಗಿದೆ.

ಈಗಾಗಲೇ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕರಾದ ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ಹಾಗೂ ಡಾ.ಜಿ. ಪರಮೇಶ್ವರ ಇವರನ್ನೂ ಸೋಲಿಸಿದ್ದಾರೆ. ಈಗ ಅದೇ ಕಾಂಗ್ರೆಸ್ ನಾಯಕರು ಇವರನ್ನು ಸೋಲಿಸುತ್ತಾರೆ ಎಂದು ತಿಳಿಸಿದ್ದಾರೆ.

Related Articles

- Advertisement -

Latest Articles