ಬೆಂಗಳೂರು : ವಸತಿ ಸಚಿವ ವಿ ಸೋಮಣ್ಣ ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಟಿಕೆಟ್ ನಿಂದಲೇ ಸೋಮಣ್ಣ ಸ್ಪರ್ಧೆ ಮಾಡಲಿದ್ದಾರೆ ಎಂದರು. ನಮ್ಮಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎನ್ನುವ ನಿಯಮವಿದೆ. ನಮ್ಮಲ್ಲಿ ಎಂಎಲ್ಸಿ, ಎಂಪಿ ಆದವರಿಗೆ ಎಂಎಲ್ಎ ಟಿಕೆಟ್ ಕೊಡಲ್ಲ. ಆದರೆ ಚಿಂಚನಸೂರ್ ರಿಗೆ ಪರಿಷತ್ ಸದಸ್ಯ ಸ್ಥಾನ ನೀಡಿದ್ದರೂ ಶಾಸಕರಾಗುವ ಆಸೆ ಅದಕ್ಕೆ ಹೋಗಿದ್ದಾರೆ. ಅದಕ್ಕೆ ಬಿಜೆಪಿ ತಲೆ ಕೆಡಿಸಿಕೊಳ್ಳಲ್ಲ. ಕಾಂಗ್ರೆಸ್ ನಿಂದ ಬಂದಿದ್ದರು, ಕಾಂಗ್ರೆಸ್ ಗೆ ಹೋಗುತ್ತಿದ್ದಾರೆ ಅಷ್ಟೇ ಎಂದರು.
ಜನಕ್ಕೆ ಬೇಕಾಗಿರುವುದು ಅಭಿವೃದ್ಧಿ, ಅದನ್ನು ಮೋದಿ ಸರ್ಕಾರ, ಬೊಮ್ಮಾಯಿ ಸರ್ಕಾರ ಮಾಡುತ್ತಿವೆ. ಹಾಗಾಗಿ ಜನತೆ ಕಾಂಗ್ರೆಸ್ ಟೀಕೆಗೆ ಟೆನ್ಶನ್ ಮಾಡಿಕೊಳ್ಳಲ್ಲ ಎಂದು ಹೇಳಿದರು. ಸೋಮಣ್ಣಗೆ ಟಿಕೆಟ್ ಸಿಗುತ್ತೋ ಇಲ್ಲವೋ ಎನ್ನುವ ಅನುಮಾನ ಬೇಡ.
ಸೋಮಣ್ಣ ಹಿರಿಯ ರಾಜಕಾರಣಿ. ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಅವರು ಬಿಜೆಪಿಯಲ್ಲಿಯೇ ಇರಲಿದ್ದಾರೆ. ಬಿಜೆಪಿ ಟಿಕೆಟ್ ನಿಂದಲೇ ಸ್ಪರ್ಧೆ ಮಾಡಲಿದ್ದಾರೆ. ಈ ಎಲ್ಲಾ ವಿಚಾರ ಈಗಾಗಲೇ ಕೇಂದ್ರದ ನಾಯಕರು ಸೋಮಣ್ಣ ಜೊತೆ ಮಾತನಾಡಿದ್ದಾರೆ ಎಂದರು.